AI-Vartha.in

ನಿಖರ ಸುದ್ದಿ, ನೇರ ವರದಿ

ಶಿವಮೊಗ್ಗದಲ್ಲಿ ಅ.08ಕ್ಕೆ ಉದ್ಯೋಗ ನೇರ ಸಂದರ್ಶನ: SSLC, PUC, ಪದವೀಧರರಿಗೆ ಅವಕಾಶ

Shivamogga Job Fair September 28 at District Employment Exchange - Shimoga News

ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಶುಭ ಸುದ್ದಿ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಅಕ್ಟೋಬರ್ 08ರಂದು ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದಲ್ಲಿ ‘ನೇರ ಸಂದರ್ಶನ’ ಆಯೋಜಿಸಲಾಗಿದೆ.

ಈ ನೇರ ಸಂದರ್ಶನದಲ್ಲಿ ಖಾಸಗಿ ಕಂಪನಿಯಾದ ಇಟಾಚಿ ಕ್ಯಾಶ್ ಮ್ಯಾನೇಜ್‌ಮೆಂಟ್ ಸರ್ವಿಸ್ ಪ್ರೈ.ಲಿ. ಭಾಗವಹಿಸಲಿದೆ. ಸಂದರ್ಶನದ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ.

08-10-2026ರ ಬೆಳಿಗ್ಗೆ 10 ಗಂಟೆಗೆ ಸಾಗರ ರಸ್ತೆಯ ಪಂಪಾ ನಗರ 2ನೇ ಕ್ರಾಸ್‌ನಲ್ಲಿರುವ ಗುತ್ಯಪ್ಪ ಕಾಲೋನಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.

SSLC, PUC ಅಥವಾ ಯಾವುದೇ ಪದವಿ ಪೂರೈಸಿರುವ, 18 ರಿಂದ 35 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.

ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ತರಬೇಕು. ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಪ್ರವೇಶ ಉಚಿತ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳಾದ 9380663606 ಅಥವಾ 9108235132ಗೆ ಕರೆ ಮಾಡಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

The District Employment Exchange Office in Shivamogga will hold a walk-in interview on October 8, 2026 at 10 AM, with Hitachi Cash Management Services Pvt Ltd recruiting. SSLC, PUC and degree holders aged 18 to 35 can attend with their resume and Aadhaar copy; entry is free.