AI-ವಾರ್ತಾ | ಶಿವಮೊಗ್ಗ | ಅಕ್ಟೋಬರ್ 7, 2026
ಶಿವಮೊಗ್ಗ: ನಗರದ ಶಿವಶರಣೆ ಅಕ್ಕಮಹಾದೇವಿ ವೃತ್ತದಲ್ಲಿ ನಿರ್ಮಿಸಲಾಗಿರುವ ಗಡಿಯಾರ ಕಲ್ಲು ಸ್ಥಂಭದ ಆವರಣದ ಕಲ್ಲು ಕಂಬಗಳು ಕಿತ್ತುಹೋಗುತ್ತಿದ್ದು, ತಕ್ಷಣ ದುರಸ್ತಿ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಇದು ಹಳೆಯ ಮಾಮ್ಕೋಸ್ ಕಟ್ಟಡದಲ್ಲಿರುವ ಗಡಿಯಾರ ಗೋಪುರವನ್ನು ಹೊರತುಪಡಿಸಿದರೆ ನಗರದ ಏಕೈಕ ಶಿಲಾಮಯ ಗಡಿಯಾರ ಸ್ಥಂಭ ಎಂದು ಹೇಳಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾಗಿದ್ದರೂ, ಇದರ ಆವರಣದ ಕಲ್ಲು ಕಂಬಗಳು ಕಿತ್ತುಹೋಗಲು ಆರಂಭವಾಗಿವೆ. ಕೂಡಲೇ ದುರಸ್ತಿ ಮಾಡದಿದ್ದರೆ ಕಂಬಗಳು ಕಣ್ಮರೆಯಾಗಿ ಮುಖ್ಯ ಸ್ಥಂಭಕ್ಕೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ
ಸ್ಥಂಭದಲ್ಲಿರುವ ಎಚ್‌ಎಂಟಿ ಕಂಪನಿ ನಿರ್ಮಿತ ಗಡಿಯಾರ ವಿದ್ಯುತ್ ಪೂರೈಕೆಯ ಏರಿಳಿತ ಸೇರಿದಂತೆ ಹಲವು ಕಾರಣಗಳಿಂದ ಹಲವು ಬಾರಿ ಕೆಟ್ಟು, ದುರಸ್ತಿಯಾಗಿದೆ.
ಕೆಲವು ತಿಂಗಳ ಹಿಂದೆ ಗಡಿಯಾರವನ್ನು ದುರಸ್ತಿಗಾಗಿ ತೆಗೆದುಕೊಂಡು ಹೋಗಲಾಗಿದ್ದು, ಇದುವರೆಗೆ ಮರಳಿ ಅಳವಡಿಸಿಲ್ಲ. ಹೀಗಾಗಿ ಸ್ಥಂಭದಲ್ಲಿ ಸದ್ಯ ಗಡಿಯಾರ ಇಲ್ಲ ಎಂದು ತಿಳಿದುಬಂದಿದೆ.
ಗಡಿಯಾರವನ್ನು ಮರು ಅಳವಡಿಸಿ, ಮುರಿದ ಕಲ್ಲು ಕಂಬಗಳನ್ನು ಮರುಸ್ಥಾಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
The stone pillars around the clock tower at Akkamahadevi Circle in Shivamogga are crumbling, and the HMT clock has been missing for several months after being taken for repair. Residents have urged authorities to restore the pillars and reinstall the clock.



More Stories
ವಿಟಿಯು ರ್ಯಾಂಕ್: ಜೆಎನ್ಎನ್ಸಿಇ ವಿದ್ಯಾರ್ಥಿಗಳ ಸಾಧನೆ, ಧನ್ಯಶ್ರೀಗೆ 7 ಚಿನ್ನದ ಪದಕ
ಮತದಾರರ ಪಟ್ಟಿ ಪರಿಶೀಲನೆ: ಅರ್ಹರ ಹೆಸರು ತೆಗೆಯದಂತೆ ಯೋಗೀಶ್ ಮನವಿ
ಎಸ್ಐಆರ್ ಲೋಪ: ಫಾರ್ಮ್ 7 ಕುರಿತು ತನಿಖೆಗೆ ಹೆಚ್.ಸಿ. ಯೋಗೇಶ್ ಆಗ್ರಹ