AI-ವಾರ್ತಾ | ಶಿವಮೊಗ್ಗ | ಅಕ್ಟೋಬರ್ 9, 2026
ಶಿವಮೊಗ್ಗ: ನಗರದಲ್ಲಿ ನಡೆಯಲಿರುವ ಯುವದಸರಾ ಕಾರ್ಯಕ್ರಮದ ಅಂಗವಾಗಿ ಚಲನಚಿತ್ರ ನಟ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ.ಯೋಗೇಶ್ ಅವರು ಮಹಾನಗರ ಪಾಲಿಕೆ ಪರವಾಗಿ ಆಹ್ವಾನಿಸಿದ್ದಾರೆ.

ಅಕ್ಟೋಬರ್ 20ರಂದು ಸಂಜೆ 6 ಗಂಟೆಗೆ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಸಾಧುಕೋಕಿಲ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿದೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿ ಶಿವಕುಮಾರ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಶಿವಕುಮಾರ್, ಮಾಜಿ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ಹಾಗೂ ಮಧು ಉಪಸ್ಥಿತರಿದ್ದರು.



More Stories
ದೇಹದಾರ್ಡ್ಯ ಸ್ಪರ್ಧೆ: ಶಿವಮೊಗ್ಗದಲ್ಲಿ ಅ.11ಕ್ಕೆ ರಾಜ್ಯ, ಜಿಲ್ಲಾ ಮಟ್ಟದ ಸ್ಪರ್ಧೆ
ಮೈಸೂರು ದಸರಾ – ಪರಂಪರೆ, ಇತಿಹಾಸ ಮತ್ತು ವೈಭವ: ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ವಿಶೇಷ ಲೇಖನ
ಶಿವಮೊಗ್ಗ ದಸರಾ ವೈಭವಕ್ಕೆ ಚಾಲನೆ: ಅಲ್ಲಮಪ್ರಭು ಮೈದಾನದ ವೇದಿಕೆಗೆ ಶಾಸಕ ಚನ್ನಬಸಪ್ಪ ಗುದ್ದಲಿ ಪೂಜೆ