ಶಿವಮೆಗ್ಗಾ/ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಮುಂಗಡ ಟಿಕೆಟ್ ಬುಕಿಂಗ್‌ಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರ್ನಾಟಕದಲ್ಲಿ ಅಡ್ವಾನ್ಸ್ ಬುಕಿಂಗ್‌ನಲ್ಲೇ ಕೋಟ್ಯಂತರ ರೂಪಾಯಿ ಗ್ರಾಸ್ ಕಲೆಕ್ಷನ್ ದಾಖಲಾಗಿದೆ.
ಸಿನಿಮಾ ತಂಡ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಟಾಕ್ಸಿಕ್ ಚಿತ್ರದ ಮುಂಗಡ ಬುಕಿಂಗ್ ವೇಳೆ ಪ್ರತಿ ಗಂಟೆಗೆ ಸುಮಾರು 19 ಸಾವಿರದಿಂದ 20 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಈ ಮೂಲಕ ಚಿತ್ರತಂಡದ ನಿರೀಕ್ಷೆಗೂ ಮೀರಿದ ಕ್ರೇಜ್ ಕಂಡುಬಂದಿದೆ.
ಕರ್ನಾಟಕದಲ್ಲಿ ₹7.76 ಕೋಟಿ ಗ್ರಾಸ್ ಕಲೆಕ್ಷನ್
ಚಿತ್ರದ ಮುಂಗಡ ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದಂತೆ ನಿರ್ಮಾಣ ಸಂಸ್ಥೆ Monster Mind Creations ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಈಗಾಗಲೇ ₹7.76 ಕೋಟಿ ಗ್ರಾಸ್ ಕಲೆಕ್ಷನ್ ದಾಖಲಾಗಿದೆ.
ಅಡ್ವಾನ್ಸ್ ಬುಕಿಂಗ್‌ನ ಪ್ರಮುಖ ಅಂಕಿ-ಅಂಶಗಳು ಹೀಗಿವೆ:
- 972 ಶೋಗಳು
- ₹7.76 ಕೋಟಿ ಗ್ರಾಸ್ ಕಲೆಕ್ಷನ್
- 1.65 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳ ಮಾರಾಟ
- ಸುಮಾರು ಶೇ.48 ಥಿಯೇಟರ್ ಆಕ್ಯುಪೆನ್ಸಿ
ಈ ಅಂಕಿ-ಅಂಶಗಳು ಸಿನಿಮಾ ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ಗೆ ಇರುವ ನಿರೀಕ್ಷೆಯನ್ನು ತೋರಿಸುತ್ತಿವೆ.

ಮಲ್ಟಿಪ್ಲೆಕ್ಸ್‌ನಲ್ಲಿ ₹500ಕ್ಕೂ ಹೆಚ್ಚು ಟಿಕೆಟ್ ದರ
ಕರ್ನಾಟಕದ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಟಾಕ್ಸಿಕ್ ಚಿತ್ರದ ಟಿಕೆಟ್ ದರ ₹500ಕ್ಕಿಂತ ಹೆಚ್ಚಿದೆ ಎಂದು ವರದಿಯಾಗಿದೆ. ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಸುಮಾರು ₹400ರಿಂದ ಆರಂಭವಾಗುತ್ತಿದ್ದರೆ, ರಿಕ್ಲೈನರ್ ಸೀಟ್‌ಗಳಿಗೆ ₹1,500ರವರೆಗೂ ದರ ನಿಗದಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರವು ಸುಮಾರು ₹200ರಿಂದ ಆರಂಭವಾಗಲಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ
ಟಾಕ್ಸಿಕ್ ಸಿನಿಮಾ ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳನ್ನು ಒಳಗೊಂಡಂತೆ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಚಿತ್ರವು ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿಯೂ ತೆರೆಕಾಣಲಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲೂ ಮೊದಲ ದಿನ ಹೆಚ್ಚಿನ ಸಂಖ್ಯೆಯ ಶೋಗಳನ್ನು ನಿಗದಿಪಡಿಸಲಾಗಿದೆ.
3 ಗಂಟೆ 14 ನಿಮಿಷದ ಟಾಕ್ಸಿಕ್
ಟಾಕ್ಸಿಕ್ ಚಿತ್ರದ ಅವಧಿ ಸುಮಾರು 3 ಗಂಟೆ 14 ನಿಮಿಷ ಎಂದು ವರದಿಯಾಗಿದೆ. ಚಿತ್ರಕ್ಕೆ ‘A’ ಪ್ರಮಾಣಪತ್ರ ನೀಡಲಾಗಿದ್ದು, ಕೆಲವು ಪದಗಳನ್ನು ಮ್ಯೂಟ್ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ ಎನ್ನಲಾಗಿದೆ.
ಚಿತ್ರಕ್ಕೆ ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದು, ಯಶ್ ಅವರ Monster Mind Creations ಹಾಗೂ KVN Productions ಜಂಟಿಯಾಗಿ ನಿರ್ಮಿಸಿವೆ. ರವಿ ಬಸ್ರೂರು ಸಂಗೀತ ಹಾಗೂ ಹಿನ್ನೆಲೆ ಸಂಗೀತದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.
ಆಗಸ್ಟ್ 26ಕ್ಕೆ ವಿಶ್ವಾದ್ಯಂತ ಬಿಡುಗಡೆ
ಯಶ್ ಅವರ ಅಭಿಮಾನಿಗಳು ಮಾತ್ರವಲ್ಲದೆ, ದೇಶದಾದ್ಯಂತ ಸಿನಿಪ್ರಿಯರು ಟಾಕ್ಸಿಕ್ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮುಂಗಡ ಬುಕಿಂಗ್‌ನಲ್ಲೇ ಇಂತಹ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಬಿಡುಗಡೆಯ ಬಳಿಕ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ಮಟ್ಟದ ದಾಖಲೆ ಬರೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಟಾಕ್ಸಿಕ್ ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Yash-starrer Toxic is creating strong buzz ahead of its August 26 release. In Karnataka, the film has reportedly recorded ₹7.76 crore gross from advance bookings, with 1.65 lakh tickets sold across 972 shows.



More Stories
ಅಂತರರಾಷ್ಟ್ರೀಯ ಹೃದ್ರೋಗ ತಜ್ಞರ ಸಮ್ಮೇಳನದಲ್ಲಿ ಡಾ. ಶರತ್ ಸಂಗನಗೌಡರ್ ಅವರಿಗೆ ಪ್ರಶಸ್ತಿ
ಶಿವಮೊಗ್ಗದಲ್ಲಿ ಹೆಚ್1ಎನ್1 ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ: ಪರೀಕ್ಷೆ, ಚಿಕಿತ್ಸೆ ಉಚಿತ
ಸೆ. 6ರಂದು ‘ಸ್ಟಡಿ ಅಬ್ರಾಡ್ ಎಕ್ಸ್ಪೋ’: ವಿದೇಶಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ