AI-Vartha.in

ನಿಖರ ಸುದ್ದಿ, ನೇರ ವರದಿ

ಮೈತ್ರಿ ಕಾಲೇಜಿನಲ್ಲಿ ಕೇರಳದ ಸಾಂಸ್ಕೃತಿಕ ಹಬ್ಬ ‘ಓಣಂ’ ಆಚರಣೆ

ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿರುವ ಮೈತ್ರಿ ಕಾಲೇಜ್ ಆ್ಯಂಡ್ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ಕೇರಳದ ಸರ್ವಧರ್ಮದ ಸಾಂಸ್ಕೃತಿಕ ಹಬ್ಬವಾದ ಓಣಂ ಅನ್ನು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕೇರಳದ ಸಾಂಪ್ರದಾಯಿಕ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಓಣಂ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.

Onam, the traditional cultural festival of Kerala, was celebrated at Maitri College and School of Nursing in Shivamogga in the presence of staff and students.