AI-Vartha.in

ನಿಖರ ಸುದ್ದಿ, ನೇರ ವರದಿ

ರಾಗಿ ಗುಡ್ಡದಲ್ಲಿ ಕರವೇ ಕಾವಲು ಪಡೆಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ವತಿಯಿಂದ ರಾಮಣ್ಣ ರಾಗಿಗುಡ್ಡ ಅವರ ನೇತೃತ್ವದಲ್ಲಿ ರಾಗಿ ಗುಡ್ಡದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಹಿರೇಮಠ ಬಿಳಕಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಆಗಮಿಸಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ಅದನ್ನು ಆಚರಿಸುವ ಕುರಿತು ಹಿತನುಡಿಗಳನ್ನು ಹೇಳಿದರು.

ಖ್ಯಾತ ಉದ್ಯಮಿ ಜ್ಯೋತಿಪ್ರಕಾಶ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ವಿಶೇಷವಾಗಿ ಅಂಗವಿಕಲ ಮತ್ತು ವಿಕಲಚೇತನರಿಗೆ ವಿಶೇಷವಾದ ಕಿಟ್‌ಗಳನ್ನು ವಿತರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಕೀಲರಾದ ಅನಿಲ್ ಕುಮಾರ್, ಸಾಹಿತಿಗಳು ಹಾಗೂ ಪತ್ರಕರ್ತರಾದ ಗಾರಾ ಶ್ರೀನಿವಾಸ್, ಚಲನಚಿತ್ರ ನಟ ರಘು ಮಲ್ನಾಡ್ ಭಾಗವಹಿಸಿದ್ದರು.

ಕರವೇ ಕಾವಲು ಪಡೆಯ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್.ಬಿ., ಪ್ರಧಾನ ಕಾರ್ಯದರ್ಶಿ ಕೆ.ಬಿ. ಉಮೇಶ್, ಉಪಾಧ್ಯಕ್ಷರಾದ ರಮೇಶಣ್ಣ ಮಲ್ಲಿಗೆನಹಳ್ಳಿ, ಪತ್ರಿಕಾ ಸಂಚಾಲಕರಾದ ಎನ್. ಮಾಲತೇಶ್, ರಾಮು, ಕರವೇ ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ ಶ್ರೀಧರ್ಮೂರ್ತಿ, ಉಪಾಧ್ಯಕ್ಷರಾದ ಅನ್ನಪೂರ್ಣ ಕೃಷ್ಣವೇಣಿ ಹಾಗೂ ಕರವೇ ಕಾವಲು ಪಡೆಯ ಹೊಸದುರ್ಗ ಅಧ್ಯಕ್ಷರಾದ ವೀಣಾ ಮತ್ತು ಅವರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಿದರು.