ಶಿವಮೊಗ್ಗ, ಸೆ.07: ಜಾನ್ಸಿ ಕಿಯಾ ವತಿಯಿಂದ ಅತ್ಯಾಧುನಿಕ ವಿನ್ಯಾಸ ಹಾಗೂ ಜಾಗತಿಕ ದರ್ಜೆಯ ‘ಆಲ್ ನ್ಯೂ ಕಿಯಾ ಸೊರೆಂಟೊ’ ಕಾರಿನ ಬಿಡುಗಡೆ ಕಾರ್ಯಕ್ರಮ ಸೆಪ್ಟೆಂಬರ್ 8ರಂದು ಸಂಜೆ 6 ಗಂಟೆಗೆ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಜಾನ್ಸಿ ಕಿಯಾ ಶೋರೂಂನಲ್ಲಿ ಆಯೋಜಿಸಲಾಗಿದೆ ಎಂದು ಜಾನ್ಸಿ ಕಿಯಾ ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಂತೋಷ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಯಾ ಇಂಡಿಯಾ ಸಂಸ್ಥೆಯು 2019ರಿಂದ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದು, ಇದೀಗ ಹೊಸ ತಲೆಮಾರಿನ ‘ಆಲ್ ನ್ಯೂ ಕಿಯಾ ಸೊರೆಂಟೊ’ ಕಾರನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ ಎಂದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ಬಿ. ವೈ. ರಾಘವೇಂದ್ರ, ಪ್ರಮುಖ ಉದ್ಯಮಿ ಕಿಮ್ಮನೆ ಜಯರಾಮ್ ಹಾಗೂ ಶಾಸಕ ಡಾ. ಧನಂಜಯ್ ಸರ್ಜಿ ಪಾಲ್ಗೊಳ್ಳಲಿದ್ದಾರೆ. ಜಾನ್ಸಿ ಕಿಯಾ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ (E.D.) ಬಿ.ಆರ್. ಸುಭಾಷ್ ಅವರ ಮಾರ್ಗದರ್ಶನ ಹಾಗೂ ನಾಯಕತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಗ್ರಾಹಕರಿಗೆ ಕಾರಿನ ತಂತ್ರಜ್ಞಾನ ಹಾಗೂ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಲಾಗುವುದು.
5 ಸ್ಟಾರ್ ಸುರಕ್ಷತೆ ಹಾಗೂ ಸುಧಾರಿತ ತಂತ್ರಜ್ಞಾನ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾನ್ಸಿ ಕಿಯಾ ಸಿಇಒ ಕೆ.ಕೆ. ಶೆಟ್ಟಿ, ‘ಆಲ್ ನ್ಯೂ ಕಿಯಾ ಸೊರೆಂಟೊ’ ಎಸ್ಯುವಿ 6 ಮತ್ತು 7 ಆಸನಗಳ (Seater) ಆಯ್ಕೆಯಲ್ಲಿ ಲಭ್ಯವಾಗಲಿದೆ. ಆಕರ್ಷಕ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹಾಗೂ ಅತ್ಯುನ್ನತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಈ ಕಾರು 5-ಸ್ಟಾರ್ ಸೇಫ್ಟಿ ರೇಟಿಂಗ್ ಹೊಂದಿದೆ ಎಂದು ವಿವರಿಸಿದರು.
5,000 ಕಾರುಗಳ ಮಾರಾಟ ಸಾಧನೆ:
ಪ್ರಸ್ತುತ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಸಾಗರ ಸೇರಿದಂತೆ 5 ಪ್ರಮುಖ ಕೇಂದ್ರಗಳಲ್ಲಿ ಜಾನ್ಸಿ ಕಿಯಾ ತನ್ನ ನೆಟ್ವರ್ಕ್ ವಿಸ್ತರಿಸಿದ್ದು, ಇದುವರೆಗೆ 5,000ಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿ ಗ್ರಾಹಕರ ವಿಶ್ವಾಸ ಗಳಿಸಿದೆ. ಈ ಭಾಗದ ಜನರಿಗೆ ಜಾಗತಿಕ ದರ್ಜೆಯ ಸೊರೆಂಟೊ ಎಸ್ಯುವಿ ಪರಿಚಯಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಿಎಕ್ಸ್ ಮ್ಯಾನೇಜರ್ ಎಸ್. ಕೆ. ದೀಪಕ್ ಉಪಸ್ಥಿತರಿದ್ದರು.
Jansi Kia Shivamogga announced the grand launch of the ‘All-New Kia Sorento’ SUV on September 8 at its showroom on Bypass Road. MP B.Y. Raghavendra, Industrialist Kimmane Jayaram, and MLA Dr. Dhananjay Sarji will attend as chief guests. The 5-star safety rated SUV will be available in 6 and 7-seater variants, as shared by General Manager Santosh and CEO K.K. Shetty.



More Stories
ಆಶ್ರಯ ಮನೆ ವಿಳಂಬ: ಪಾಲಿಕೆಗೆ ಮುತ್ತಿಗೆ, ಈಶ್ವರಪ್ಪ ಪೊಲೀಸ್ ವಶಕ್ಕೆ
ಕೋಣಂದೂರು ರೋಟರಿಯಿಂದ ಉಚಿತ ಶ್ರವಣ ತಪಾಸಣೆ: 5 ಜನರಿಗೆ ಶ್ರವಣ ಯಂತ್ರ
ರೇಡಿಯೋ ಶಿವಮೊಗ್ಗ 90.8 FM: ರಾಜ್ಯೋತ್ಸವಕ್ಕೆ 24 ಗಂಟೆ ನೇರಪ್ರಸಾರ