AI-Vartha.in

ನಿಖರ ಸುದ್ದಿ, ನೇರ ವರದಿ

ಶಿವಮೊಗ್ಗ ದಸರಾ: ಸುರೇಖಾ ಹೆಗಡೆ ನೇತೃತ್ವದಲ್ಲಿ ಸಂಗೀತ ಸಂಧ್ಯಾ

SHIVAMOGGA DASARA 2026

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿರುವ ಶಿವಮೊಗ್ಗ ದಸರಾ-2026ರ ಸಾಂಸ್ಕೃತಿಕ ದಸರಾ ಅಂಗವಾಗಿ, ಖ್ಯಾತ ಗಾಯಕಿ ಸುರೇಖಾ ಹೆಗಡೆ ಅವರ ನೇತೃತ್ವದಲ್ಲಿ ಸಂಗೀತ ಸೀಮೋಲ್ಲಂಘನ ಕಾರ್ಯಕ್ರಮ ಅಕ್ಟೋಬರ್ 21ರಂದು (ಬುಧವಾರ) ನಡೆಯಲಿದೆ.

ನಗರದ ಫ್ರೀಡಂ ಪಾರ್ಕ್‌ನ ಶ್ರೀ ಅಲ್ಲಮಪ್ರಭು ಬಯಲು ಮೈದಾನದಲ್ಲಿ ಸಂಜೆ 3.45ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ.

ಸಂಜೆ 4.00ಕ್ಕೆ ಶಿವಮೊಗ್ಗದ 55 ಗಾಯಕ-ಗಾಯಕಿಯರು ಪ್ರಸ್ತುತಪಡಿಸುವ ಸಂಗೀತ ಸ್ವನ ಸಮೂಹ ಗಾಯನ ನಡೆಯಲಿದೆ. 4.20ಕ್ಕೆ ನೃತ್ಯ ನಮನ ಹಾಗೂ 4.30ಕ್ಕೆ ನಗರದ ಖ್ಯಾತ ವಕೀಲರಿಂದ ವಕೀಲ ಗಾನ ಲಹರಿ ವೃಂದ ಗಾಯನ ಇರಲಿದೆ.

4.50ಕ್ಕೆ ವಿಶೇಷ ವಕೀಲರ ಹಾಡಿನ ಬಿಡುಗಡೆ ನಡೆಯಲಿದೆ. 4.55ಕ್ಕೆ ಶಿವಮೊಗ್ಗದ 50 ಶಿಕ್ಷಕರು ಪ್ರಸ್ತುತಪಡಿಸುವ ಶಿಕ್ಷಕ ಸ್ವರ ಮೇಳ ಸಮೂಹ ಗಾಯನ ಆಯೋಜಿಸಲಾಗಿದೆ.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಸಂಗೀತ ಸೀಮೋಲ್ಲಂಘನ ಸಂಧ್ಯಾ ಸಂಜೆ 5.30ಕ್ಕೆ ಆರಂಭವಾಗಲಿದೆ. ಸುರೇಖಾ ಹೆಗಡೆ ಅವರೊಂದಿಗೆ ಬೆಂಗಳೂರಿನ ಅಜಯ್ ವಾರಿಯರ್, ಉಡುಪಿಯ ಸಂಗೀತಾ ಬಾಲಚಂದ್ರ, ಕಿರಣ್ ಚೆನ್ನಗಿರಿ ಹಾಗೂ ಕು. ಸ್ವರ ಹೆಗಡೆ ಹಾಡಲಿದ್ದಾರೆ.

ವಿನೂತನ ಕಲ್ಪನೆಯಲ್ಲಿ ಯಕ್ಷ ಭಾವ ನೃತ್ಯ ಪ್ರದರ್ಶನ ಕೂಡ ನಡೆಯಲಿದೆ. ಕಾರ್ಯಕ್ರಮವನ್ನು ವಿನಯ್ ಶಿವಮೊಗ್ಗ ನಿರೂಪಿಸಲಿದ್ದಾರೆ.