AI-ವಾರ್ತಾ | ಶಿವಮೊಗ್ಗ | ಅಕ್ಟೋಬರ್ 19, 2026
ಶಿವಮೊಗ್ಗ: ನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಹೋಮ, ಹವನ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು. ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಶ್ರೀ ಕಾಳಿಕಾಂಬ ದೇವಿ ಸನ್ನಿಧಿಯಲ್ಲಿ ಪೂಜೆಗಳು ನಡೆದವು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು.

ನವರಾತ್ರಿಯ ಏಳನೇ ದಿನ ಆರಾಧಿಸಲಾಗುವ ದುರ್ಗೆಯ ಏಳನೇ ಶಕ್ತಿ ಕಾಳರಾತ್ರಿ ಎಂಬ ಹಿನ್ನೆಲೆಯಲ್ಲಿ, ಕಾಳಿಕಾಂಬ ದೇವಿಗೆ ವಿವಿಧ ಹೂವುಗಳಿಂದ ಕಾಳರಾತ್ರಿ ದುರ್ಗಾದೇವಿ ಅಲಂಕಾರ ಮಾಡಲಾಯಿತು. ಸ್ವಾಮೀಜಿ ಅವರು ವಿಶೇಷ ಪೂಜೆಗಳನ್ನು ನೆರವೇರಿಸಿದರು.
ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅವರೂ ಉಪಸ್ಥಿತರಿದ್ದರು.
ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲ ಸುರೇಶ್ ಎಸ್.ಎಚ್., ಶಿಕ್ಷಕರು, ಉಪನ್ಯಾಸಕರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.



More Stories
ವೆಂಕಟೇಶ್ ಎಸ್. ಸಂಪ ಅವರಿಗೆ ಇಂಟರ್ನ್ಯಾಷನಲ್ ನೋಬರ್ ಪ್ರಶಸ್ತಿ
ಕೋಣಂದೂರು ರೋಟರಿ ಕ್ಲಬ್: ನವರಾತ್ರಿ ಅಂಗವಾಗಿ ದಾಂಡಿಯಾ ನೃತ್ಯ
ಶಿವಮೊಗ್ಗದಲ್ಲಿ ಮಾದಕ ದ್ರವ್ಯ ವಿರೋಧಿ ರಾಷ್ಟ್ರೀಯ ಬೈಕ್ ಜಾಥಾಕ್ಕೆ ಸ್ವಾಗತ