ಧಾರವಾಡ, Ai-ವಾರ್ತ, ಸೆಪ್ಟೆಂಬರ್ 17: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ದಾಖಲೆ ತಿದ್ದುಪಡಿ ಮಾಡಿಕೊಡಲು ಬರೋಬ್ಬರಿ 50 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇದು ಇತ್ತೀಚಿನ ಅತ್ಯಂತ ದೊಡ್ಡ ಲೋಕಾಯುಕ್ತ ದಾಳಿ ಎನಿಸಿಕೊಂಡಿದೆ.
ಘಟನೆಯ ಹಿನ್ನೆಲೆ ಏನು? ಬಾಗಲಕೋಟೆ ಮೂಲದ ಮಂಜುನಾಥ ಅರಳಿಕಟ್ಟಿ ಎಂಬುವವರು ಧಾರವಾಡ-ಕಲಘಟಗಿ ಮಧ್ಯದಲ್ಲಿರುವ ಯರಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಖರೀದಿಸಿದ್ದ 33 ಎಕರೆ ಜಮೀನಿನಲ್ಲಿ 13 ಎಕರೆ ಖರಾಬು ಭೂಮಿ ಇತ್ತು. ಈ ಪಹಣಿ ದಾಖಲೆಯನ್ನು ಸರಿಪಡಿಸಿಕೊಡಲು ತಹಶೀಲ್ದಾರ್ ಸಚ್ಚಿದಾನಂದ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಅದೇ ಜಮೀನಿನಲ್ಲಿ 2 ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹೊಂಚು ಹಾಕಿದ್ದರು ಎನ್ನಲಾಗಿದೆ.
ಕರ್ನಾಟಕ ಕಾಲೇಜು ಆವರಣದಲ್ಲಿ ಲಂಚ ಸ್ವೀಕಾರ ದೂರುದಾರರ ದೂರಿನನ್ವಯ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ, ಡಿಎಸ್ಪಿ ರವೀಂದ್ರ ಕುರುಬಗಟ್ಟಿ, ಇನ್ಸ್ಪೆಕ್ಟರ್ಗಳಾದ ಪ್ರಸಾದ್, ಕರುಣೇಶಗೌಡ ಹಾಗೂ ಪ್ರಸಾದ ಪಾನೇಕರ್ ಅವರನ್ನೊಳಗೊಂಡ ತಂಡ ದಾಳಿ ನಡೆಸಿತು. ಬುಧವಾರ ರಾತ್ರಿ ಕರ್ನಾಟಕ ಕಾಲೇಜು ಆವರಣದಲ್ಲಿ ಲಂಚದ ಹಣ ಪಡೆಯುತ್ತಿದ್ದಾಗ ತಹಶೀಲ್ದಾರ್ರನ್ನು ಕಾಯ್ದುಕೊಂಡು ನಿಂತಿದ್ದ ಲೋಕಾಯುಕ್ತ ಸಿಬ್ಬಂದಿ ರೆಡ್ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ.
ಕಚೇರಿಯಲ್ಲಿ ಪೂಜೆ-ಅನ್ನಸಂತರ್ಪಣೆ ನಡುವೆಯೇ ದಾಳಿ! ವಿಶೇಷವೆಂದರೆ, ತಹಶೀಲ್ದಾರ್ ಸಚ್ಚಿದಾನಂದ ತಮ್ಮ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಸುಮಾರು ಎರಡು ಸಾವಿರ ಜನರಿಗೆ ಭಾರಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದ್ದರು. ಅಡುಗೆ ಸಿದ್ಧವಾಗಿ ಅನ್ನಸಂತರ್ಪಣೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದಂತೆಯೇ ಬಂದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ತಹಶೀಲ್ದಾರ್ಗೆ ತಕ್ಕ ಶಾಸ್ತಿ ಮಾಡಿದ್ದಾರೆ.
In one of the biggest operations, Dharwad Tahsildar Sachidananda Kuchanur was caught red-handed by the Lokayukta while accepting a bribe of Rs 50 lakh to fix land records in Yarikoppa village. Led by SP Siddalingappa, the team executed the raid while the Tahsildar had arranged a grand Satyanarayana puja and feast at his office.



More Stories
ತುಳು ಭಾಷೆಗೆ 2ನೇ ಹೆಚ್ಚುವರಿ ಆಡಳಿತ ಭಾಷೆ ಸ್ಥಾನಮಾನ: ಡಿ.ಕೆ. ಶಿವಕುಮಾರ್
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 18ರ ಪೆಟ್ರೋಲ್-ಡೀಸೆಲ್ ದರಪಟ್ಟಿ!
ನಂದಿನಿ ಹಾಲು ದರ ಲೀಟರ್ಗೆ 8 ರೂ. ಏರಿಕೆಗೆ ಒಕ್ಕೂಟಗಳ ಪಟ್ಟು!