AI-ವಾರ್ತಾ | ಶಿವಮೊಗ್ಗ | ಅಕ್ಟೋಬರ್ 10, 2026
ಶಿವಮೊಗ್ಗ: ಜಾತ್ಯತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಅಕ್ಟೋಬರ್ 12 ರಂದು ಶಿವಮೊಗ್ಗ ತಾಲ್ಲೂಕಿಗೆ ಭೇಟಿ ನೀಡಲಿದ್ದು, ರೈತ ಸ್ವಾಭಿಮಾನಿ ಯಾತ್ರೆ ಮತ್ತು ಬಹಿರಂಗ ಸಭೆಗೆ ಚಾಲನೆ ನೀಡಲಿದ್ದಾರೆ.
ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಈ ಯಾತ್ರೆ ಹಾಗೂ ಬಹಿರಂಗ ಸಭೆಯ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಭೇಟಿಯ ಅಂಗವಾಗಿ ನಿಖಿಲ್ ಅವರು ಶಿವಮೊಗ್ಗ ತಾಲ್ಲೂಕಿನ ತ್ಯಾಜವಳ್ಳಿ ಮತ್ತು ಯಡವಾಲ ಗ್ರಾಮಗಳ ರೈತರ ಜಮೀನುಗಳಿಗೆ ತೆರಳಿ ಬೆಳೆ ವೀಕ್ಷಣೆ ನಡೆಸಲಿದ್ದಾರೆ.
ಕಾರ್ಯಕ್ರಮವು ಅ.12 ರಂದು ಬೆಳಿಗ್ಗೆ 11 ಗಂಟೆಗೆ ಆಯನೂರು ಪಿಡಬ್ಲ್ಯೂಡಿ ಪ್ರವಾಸಿ ಮಂದಿರ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರಿ ಸಹಕರಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯ ನಾಯ್ಕ ಅವರು ಕೋರಿದ್ದಾರೆ.
ರೈತರ ಸಂಕಷ್ಟವನ್ನು ಆಲಿಸಿ, ಚರ್ಚಿಸಿ, ಸಂವಾದ ನಡೆಸುವ ಉದ್ದೇಶದಿಂದ ರೈತರ ಮನೆಬಾಗಿಲಿಗೆ ತೆರಳಿ, ಬರಪರಿಸ್ಥಿತಿಯಿಂದ ಉಂಟಾಗಿರುವ ನಷ್ಟವನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
JD(S) Youth Wing State President Nikhil Kumaraswamy will visit Shivamogga taluk on October 12 to flag off the Raitha Swabhimani Yatre and address a public meeting demanding solutions to farmers’ problems. He will also inspect crops in Thyajavalli and yadavala villages, with the programme beginning at 11 am at the PWD Pravasi Mandira premises in Ayanuru



More Stories
ಶಾಂತಿ ಸಾಗರ ಕಲಾ ಸಂಘದಿಂದ ಭಾವಗೀತೆ, ಜನಪದ ಗೀತೆ ಗಾಯನ; ಉಚಿತ ಪ್ರವೇಶ
ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ: ಶಿಕ್ಷಕರು ಮಾಹಿತಿ ಪಡೆಯಬೇಕು ಎಂದ ಶಕುಂತಲಾ
ಅಂಗಾಂಗ ದಾನ ಜಾಗೃತಿ: ಶಿವಮೊಗ್ಗಕ್ಕೆ ವಿಸ್ತರಿಸಿದ ಬೆಂಗಳೂರಿನ ಸಹೋದರರು