ಶಿವಮೊಗ್ಗ: ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಸಾಗುತ್ತಿದ್ದು, ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದಾರೆ.

ಸದ್ಯ ಗಣಪತಿ ಮೆರವಣಿಗೆ ಕೋಟೆ ಮಾರಿಕಾಂಬ ದೇವಸ್ಥಾನದ ಸಮೀಪದಿಂದ ಸಾಗುತ್ತಿದ್ದು, ಶಿವಪ್ಪ ನಾಯಕ ವೃತ್ತ, ರಾಮಣ್ಣ ಶ್ರೇಷ್ಠಿ ಪಾರ್ಕ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಭಕ್ತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಂಡುಬರುತ್ತಿದೆ. ಮೆರವಣಿಗೆಯ ಮಾರ್ಗದುದ್ದಕ್ಕೂ ಜನಸಾಗರವೇ ನಿರ್ಮಾಣವಾಗಿದೆ

ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ವಿವಿಧ ವಯೋಮಾನದ ಜನರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಭಕ್ತರು “ಗಣಪತಿ ಬಪ್ಪಾ ಮೋರಿಯಾ” ಎಂಬ ಘೋಷಣೆಗಳನ್ನು ಮೊಳಗಿಸುತ್ತಾ ಸಂಭ್ರಮದಿಂದ ಸಾಗುತ್ತಿದ್ದಾರೆ.

ಗಣಪತಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದು, ಸಂಪೂರ್ಣ ಪ್ರದೇಶದಲ್ಲಿ ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಭಕ್ತರ ಉತ್ಸಾಹ ಮತ್ತು ಅಪಾರ ಜನಸ್ತೋಮ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದೆ.




More Stories
ಶಿವಮೊಗ್ಗ: ರಾಮಣ್ಣ ಶ್ರೇಷ್ಠಿ ಪಾರ್ಕ್ನಲ್ಲಿ ವಿಜೃಂಭಣೆಯ 97ನೇ ವರ್ಷದ ಶ್ರೀ ವಿನಾಯಕೋತ್ಸವ; ಅಕ್ಟೋಬರ್ 4ಕ್ಕೆ ವೈಭವದ ರಾಜಬೀದಿ ಉತ್ಸವ!
ದ್ವೇಷದ ವಿರುದ್ಧ ಪ್ರೀತಿಯ ಹೆಜ್ಜೆ: ಸೆ. 30ಕ್ಕೆ ಶಿಕಾರಿಪುರದಿಂದ ರಾಜ್ಯಮಟ್ಟದ ‘ಭಾರತ್ ಜೋಡೋ 2.0’ ಯಾತ್ರೆಗೆ ಚಾಲನೆ!
ಸೂಡಾ ಲಂಚ ಪ್ರಕರಣ ಹಿನ್ನೆಲೆ: ಸಚಿವ ಮಧು ಬಂಗಾರಪ್ಪ ರಾಜೀನಾಮೆಗೆ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆಗ್ರಹ