AI-ವಾರ್ತಾ | ಶಿವಮೊಗ್ಗ | ಅಕ್ಟೋಬರ್ 16, 2026
ಶಿವಮೊಗ್ಗ: ಶಿವಮೊಗ್ಗ ದಸರಾದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊರಲು ಸಕ್ರೆಬೈಲು ಆನೆ ಬಿಡಾರದಿಂದ ನಿನ್ನೆ ಸಂಜೆ ನಗರಕ್ಕೆ ಆಗಮಿಸಿದ ಆನೆಗಳಿಗೆ ಭವ್ಯ ಸ್ವಾಗತ ನೀಡಲಾಯಿತು.

ನಗರದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ವಾಸವಿ ಶಾಲಾ ಆವರಣದಲ್ಲಿ ಸಾಗರ್, ಬಹದ್ದೂರ್ ಮತ್ತು ಸೋಮಣ್ಣ ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಕಾರ್ಪೊರೇಟರ್ಗಳಾದ ಜ್ಞಾನೇಶ್ವರ್, ಪ್ರಭಾಕರ್, ಅನಿತಾ ರವಿಶಂಕರ್, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Elephants Sagar, Bahadur and Somanna, which arrived from the Sakrebailu elephant camp to carry the Chamundeshwari ambari at Shivamogga Dasara, were given a grand welcome. Special pujas were held at Kote Anjaneya Swamy temple and at the Vasavi School premises in the presence of MLA S.N. Channabasappa.



More Stories
ಶಿವಮೊಗ್ಗ ದಸರಾ ಉತ್ಸವ: ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ಪೋಸ್ಟರ್ ಬಿಡುಗಡೆ
ಶಿವಮೊಗ್ಗ ರೈತ ದಸರಾ ಜಾಥಾ: ಕೃಷಿ ಪರಂಪರೆಯ ವೈಭವ ಅನಾವರಣ
ಶಿವಮೊಗ್ಗ ದಸರಾ ಗಜಪಡೆ ಆಗಮನ: ಜಂಬೂ ಸವಾರಿಗೆ 6 ದಿನ ಬಾಕಿ