AI-ವಾರ್ತಾ | ಶಿವಮೊಗ್ಗ | ಅಕ್ಟೋಬರ್ 14, 2026
ಡಿವಿಎಸ್ ಕಾಲೇಜಿನಲ್ಲಿ ಗಾಂಧಿ ಅಧ್ಯಯನ ಕೇಂದ್ರ ಆರಂಭ
ಶಿವಮೊಗ್ಗ: ಇಂದಿನ ವಿದ್ಯಾರ್ಥಿಗಳಿಗೆ ಗಾಂಧೀಜಿ ಅವರ ವಿಚಾರಗಳು ಅತ್ಯಂತ ಅಗತ್ಯ ಎಂದು ಕರ್ನಾಟಕ ಗಾಂಧಿ ಅಧ್ಯಯನ ಕೇಂದ್ರದ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಹೇಳಿದ್ದಾರೆ.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಕನ್ನಡ ವಿಭಾಗ, ಎನ್ಎಸ್ಎಸ್ ಘಟಕ, ಐಕ್ಯೂಎಸಿ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಕಾಲೇಜಿನಲ್ಲಿ ‘ಗಾಂಧಿ ಅಧ್ಯಯನ ಕೇಂದ್ರ’ ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ವೂಡೇ ಪಿ. ಕೃಷ್ಣ ಅವರು, ಆಧುನಿಕ ಬದುಕಿನ ಒತ್ತಡದಲ್ಲಿ ಕಳೆದುಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಗಾಂಧೀಜಿ ಅವರಿಂದ ಮತ್ತೆ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಡಿವಿಎಸ್ ಸಂಸ್ಥೆ ಅಧ್ಯಕ್ಷ ಕೆ. ಬಸಪ್ಪಗೌಡ ಮಾತನಾಡಿ, ಸತ್ಯ ಮತ್ತು ಅಹಿಂಸೆಯ ಮೂಲಕ ಬದುಕಿ ಮಾದರಿಯಾದವರು ಗಾಂಧೀಜಿ. ಜಾತಿ, ಮತ, ಧರ್ಮದ ತಾರತಮ್ಯವನ್ನು ಮೀರಿ ಮುನ್ನಡೆಯಬೇಕು ಎಂದು ಹೇಳಿದರು.
ಸಂಸ್ಥೆಯ ಕುಲಸಚಿವ ಡಾ. ಎಂ. ವೆಂಕಟೇಶ್ ಅವರು, ಗಾಂಧೀಜಿ ಅವರ ಬದುಕೇ ನಮಗೆ ಮಾದರಿಯಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರಸ್ವಾಮಿ ಮಾತನಾಡಿ, ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳಿಗೆ ಗಾಂಧೀಜಿ ಅವರ ವಿಚಾರಧಾರೆಯನ್ನು ತಲುಪಿಸಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಗಾಂಧಿ ಅಧ್ಯಯನ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶಿವಪ್ರಸಾದ್ ಪಟ್ಟಣಗೆರೆ ಅವರು, ಶಿವಮೊಗ್ಗ ನಗರದಲ್ಲಿ ಡಿವಿಎಸ್ ಕಾಲೇಜು ತನ್ನದೇ ಆದ ಛಾಪು ಹೊಂದಿದೆ. ಕೇಂದ್ರದ ಮೂಲ ಉದ್ದೇಶ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಆಶಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್.ಕೆ. ಮಂಜುನಾಥ ಮಾತನಾಡಿ, ಹೊಸದಾಗಿ ಆರಂಭವಾಗಿರುವ ಕೇಂದ್ರದ ಮೂಲಕ ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಗಾಂಧೀಜಿ ಅವರ ಜೀವನ ಸಂದೇಶ, ಮಾನವೀಯ ಮೌಲ್ಯ, ಆದರ್ಶ ಮತ್ತು ಸಿದ್ಧಾಂತಗಳನ್ನು ತಲುಪಿಸುವಲ್ಲಿ ಕೇಂದ್ರ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಕನ್ನಡ ವಿಭಾಗದ ಡಾ. ಉಮೇಶ್ ಅಂಗಡಿ, ಡಾ. ಡಿ.ಬಿ. ಶಿವರುದ್ರಪ್ಪ, ಡಾ. ರಾಜೇಶ್ವರಿ, ಸೌಭಾಗ್ಯ, ವನಜಾಕ್ಷಿ, ಕಾಂಚನಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
A Gandhi Study Centre has been set up at DVS College of Arts, Science and Commerce in Shivamogga in collaboration with the Karnataka Gandhi Smaraka Nidhi. Karnataka Gandhi Study Centre president Nadoja Dr. Vooday P. Krishna said Gandhian thought is essential for today’s students.



More Stories
ಸಾಮೂಹಿಕ ವಿವಾಹಕ್ಕೆ ಜೋಡಿಗೆ ₹50,000: ಅಲ್ಪಸಂಖ್ಯಾತರಿಗೆ ಅವಕಾಶ
ಬೊಮ್ಮನಕಟ್ಟೆ ರಸ್ತೆ ಅಗಲೀಕರಣಕ್ಕೆ ಇ. ವಿಶ್ವಾಸ್ ಮನವಿ
ರಾಜ್ಯ ಕುಸ್ತಿ ಸಂಸ್ಥೆ ಅಧ್ಯಕ್ಷರಾಗಿ ಗುಣರಂಜನ್ ಶೆಟ್ಟಿ ಮರು ಆಯ್ಕೆ