AI-Vartha.in

ನಿಖರ ಸುದ್ದಿ, ನೇರ ವರದಿ

ಕಾರ್ಮಿಕ ದಸರಾ ಇಲ್ಲ: ಶಿವಮೊಗ್ಗ ಪಾಲಿಕೆ ಆವರಣದಲ್ಲಿ ಪ್ರತಿಭಟನೆ

shivamogga-karmika-dasara-protest

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಚರಿಸುವ 2026ನೇ ಸಾಲಿನ ದಸರಾ ಉತ್ಸವದಲ್ಲಿ ಕಾರ್ಮಿಕ ದಸರಾ ಏರ್ಪಡಿಸದಿರುವುದನ್ನು ಖಂಡಿಸಿ ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಪದಾಧಿಕಾರಿಗಳು ಇಂದು ಪಾಲಿಕೆ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಸಂದರ್ಭದಲ್ಲಿ ಸಂಘದ ವತಿಯಿಂದ ಪಾಲಿಕೆಯ ಆಯುಕ್ತರಿಗೆ ಪತ್ರ ಸಲ್ಲಿಸಲಾಗಿದೆ. ದಸರಾದಲ್ಲಿ ಕಾರ್ಮಿಕ ದಸರಾ ಕಾರ್ಯಕ್ರಮ ಏರ್ಪಡಿಸುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು ಎಂದು ರಾಜ್ಯ ಉಪಾಧ್ಯಕ್ಷರು ಸುರೇಖಾ ಫಾಲಾಕ್ಷಪ್ಪ ತಿಳಿಸಿದರು

ಕಳೆದ ವರ್ಷವೂ ಇದೇ ಬೇಡಿಕೆಯ ಮನವಿ ನೀಡಲಾಗಿತ್ತು. ಆಗ ಆಯುಕ್ತರು 2026ನೇ ಸಾಲಿನಲ್ಲಿ ಕಾರ್ಯಕ್ರಮ ಏರ್ಪಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು ಎಂದು ತಿಳಿಸಿದರು . ಆದರೆ ಈ ಬಾರಿಯೂ ಕಾರ್ಯಕ್ರಮ ಸೇರ್ಪಡೆಯಾಗದಿರುವುದು ಬೇಸರ ತರಿಸಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ದೇಶದ ಅಭಿವೃದ್ಧಿಯಲ್ಲಿ ಸೈನಿಕರು, ರೈತರು ಮತ್ತು ಕಾರ್ಮಿಕರ ಕೊಡುಗೆ ಅಪಾರ. ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಕಾರ್ಮಿಕ ಸಮೂಹಕ್ಕೆ ಗೌರವ ಸಿಗಬೇಕು ಎಂಬುದು ಸಂಘದ ಆಗ್ರಹ.

ಕಟ್ಟಡ ಕಾರ್ಮಿಕರು, ಹಮಾಲಿಗಳು, ಚಾಲಕರು, ಆಟೋ ಚಾಲಕರು, ಮೆಕ್ಯಾನಿಕ್‌ಗಳು, ಕಮ್ಮಾರರು, ಕುಂಬಾರರು, ಮಡಿವಾಳರು, ಟೈಲರ್‌ಗಳು, ಅಡುಗೆ ಕಾರ್ಮಿಕರು, ಅಕ್ಕಸಾಲಿಗರು, ಫೋಟೋಗ್ರಾಫರ್‌ಗಳು, ಹೋಟೆಲ್ ಕಾರ್ಮಿಕರು, ಗಿಗ್ ಕಾರ್ಮಿಕರು ಮತ್ತು ಮನೆಕೆಲಸ ಕಾರ್ಮಿಕರು ಸೇರಿದಂತೆ ಹಲವು ವಲಯಗಳ ಕಾರ್ಮಿಕರು ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ನಾಡಹಬ್ಬ ದಸರಾದಲ್ಲಿ ಶ್ರಮಿಕ ಸಮಾಜವನ್ನು ನಿರ್ಲಕ್ಷಿಸಿರುವುದು ಖಂಡನೀಯ ಎಂದು ಸಂಘ ಆರೋಪಿಸಿದೆ. ದಸರಾ ಉತ್ಸವದ ನಿರ್ವಹಣೆಯಲ್ಲೂ ಕಾರ್ಮಿಕರ ಅಗತ್ಯವಿದೆ ಎಂಬುದನ್ನು ಆಯುಕ್ತರು ಗಮನಿಸಬೇಕು ಎಂದು ಒತ್ತಾಯಿಸಿದೆ.

ಕಾರ್ಮಿಕ ದಸರಾ ಆಯೋಜನೆಗೆ ಬೆಂಬಲ ಕೋರಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ಪಕ್ಷಗಳ ಜಿಲ್ಲಾಧ್ಯಕ್ಷರು, ಮಾಜಿ ಸಂಸದರು ಮತ್ತು ಮಾಜಿ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದು ಸಂಘ ತಿಳಿಸಿದೆ. ಆದರೂ ಪಾಲಿಕೆ ಅವಕಾಶ ನೀಡದಿರುವುದು ಖಂಡನೀಯ ಎಂದು ಸಂಸ್ಥಾಪಕರು ಕುಪೇಂದ್ರಪ್ಪ ಆಯನೂರು ತಿಲಿಸಿದ್ದಾರೆ

ಪಾಲಿಕೆಯ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲೇ ಪ್ರತಿಭಟಿಸಲು ಮೊದಲು ತೀರ್ಮಾನಿಸಲಾಗಿತ್ತು. ಆದರೆ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಗೊಂದಲ ಉಂಟು ಮಾಡಬಾರದೆಂಬ ಉದ್ದೇಶದಿಂದ ಪಾಲಿಕೆ ಕಚೇರಿ ಆವರಣದಲ್ಲಿ ಪ್ರತಿಭಟನೆ ದಾಖಲಿಸಲಾಗಿದೆ ಎಂದು ಸಂಘ ವಿವರಿಸಿದೆ.

“ಇದು ಅಂತ್ಯವಲ್ಲ, ಆರಂಭ” ಎಂದು ಹೇಳಿರುವ ಸಂಘ, ನಾಡಹಬ್ಬ ದಸರಾದಲ್ಲಿ ಕಾರ್ಮಿಕ ದಸರಾವನ್ನು ಸೇರಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದೆ.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ರಾಜ್ಯ ಉಪಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ, ರಾಜ್ಯ ಖಜಾಂಚಿ ಶಶಿಕುಮಾರ್, ಶಿವಮೊಗ್ಗ ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ, ಮಹಾನಗರ ಅಧ್ಯಕ್ಷ ಚಂದ್ರಶೇಖರ್ ವೈ., ಪ್ರಧಾನ ಕಾರ್ಯದರ್ಶಿಗಳಾದ ಶೃತಿ ಪ್ರಮೋದ್ ಮತ್ತು ದೀಪಾ ರಮೇಶ್, ಭದ್ರಾವತಿ ಗ್ರಾಮಾಂತರ ಅಧ್ಯಕ್ಷ ಜಬೀವುಲ್ಲಾ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಮಂಜಪ್ಪ ಬೇಡರ ಹೊಸಳ್ಳಿ, ಸಾಗರ ಗ್ರಾಮಾಂತರ ತಾಲ್ಲೂಕು ಅಧ್ಯಕ್ಷ ಗಣಪತಿ ತಾಳಗುಪ್ಪ, ಸಾಗರ ನಗರ ಅಧ್ಯಕ್ಷ ರಾಜೇಶ್ ಶೇಟ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು

The State Unorganised Workers’ Association staged a protest today at the Shivamogga City Corporation premises, objecting to the absence of a “Karmika Dasara” (Workers’ Dasara) in the 2026 Dasara festivities. The association alleged that the commissioner’s earlier assurance was not honoured and warned that its struggle will continue.