ಶಿವಮೊಗ್ಗ, Ai-ವಾರ್ತ, ಸೆಪ್ಟೆಂಬರ್ 12: ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಪತಿ (VC) ಪ್ರೊ. ಶರತ್ ಅನಂತಮೂರ್ತಿ ಅವರಿಗೆ ಕರ್ನಾಟಕ ರಾಜ್ಯಪಾಲರ ಸಚಿವಾಲಯವು ನೋಟಿಸ್ ನೀಡಿದೆ. ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಕಾರಣಗಳಿಗಾಗಿ ಸಾಲು ಸಾಲು ವಿದೇಶ ಪ್ರವಾಸ ಕೈಗೊಂಡಿರುವುದಾಗಿ ಆರೋಪಿಸಿ, ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.
ರಾಜ್ಯಪಾಲರ ಸಚಿವಾಲಯದ 02-09-2026ರ ಜಿಎಸ್ 07 ಕೆಪಿಎಂ 2024 (ಪಿ-1) ಸಂಖ್ಯೆಯ ನೋಟಿಸ್‌ನಲ್ಲಿ, ಕುವೆಂಪು ವಿವಿಯ ಉಪಕುಲಪತಿ ಹುದ್ದೆಯಲ್ಲಿದ್ದುಕೊಂಡೇ ಅನುಮತಿ ರಹಿತವಾಗಿ ಕೈಗೊಂಡ ನಾಲ್ಕು ವಿದೇಶ ಪ್ರವಾಸಗಳ ಕುರಿತು ಗಂಭೀರ ಪ್ರಶ್ನೆ ಎತ್ತಲಾಗಿದೆ. ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಪ್ರೊ. ಶರತ್ ಅನಂತಮೂರ್ತಿ ಅವರು ಜೂನ್ 19, 2024 ರಿಂದ ಜುಲೈ 11, 2024 ರವರೆಗೆ (23 ದಿನಗಳು), ಡಿಸೆಂಬರ್ 16, 2024 ರಿಂದ ಜನವರಿ 06, 2025 ರವರೆಗೆ (24 ದಿನಗಳು), ಜುಲೈ 14, 2025 ರಿಂದ ಜುಲೈ 25, 2025 ರವರೆಗೆ (12 ದಿನಗಳು) ಹಾಗೂ ಆಗಸ್ಟ್ 17, 2026 ರಿಂದ ಸೆಪ್ಟೆಂಬರ್ 09, 2026 ರವರೆಗೆ (20 ದಿನಗಳು) ಕೆನಡಾ ದೇಶಕ್ಕೆ ವೈಯಕ್ತಿಕ ಪ್ರವಾಸ ತೆರಳಿದ್ದರು. ಈ ನಾಲ್ಕೂ ಪ್ರವಾಸಗಳಿಗೂ ರಾಜ್ಯಪಾಲರ ಕಚೇರಿಯಿಂದ ಯಾವುದೇ ರೀತಿಯ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ದೂರಲಾಗಿದೆ.
ರಾಜ್ಯಪಾಲರ ಸಚಿವಾಲಯದಿಂದ 7 ದಿನಗಳ ಡೆಡ್‌ಲೈನ್ ಕುಲಾಧಿಪತಿಗಳ ಅನುಮತಿ ಪಡೆಯದೆ ಈ ರೀತಿ ವಿದೇಶ ಪ್ರವಾಸಗಳನ್ನು ಕೈಗೊಂಡಿರುವುದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಏಕೆ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ತಿಳಿಸುವಂತೆ ಉಪ ಕುಲಪತಿಗಳಿಗೆ ಸೂಚಿಸಲಾಗಿದೆ. ಪ್ರತಿ ಪ್ರವಾಸಕ್ಕೂ ಮುನ್ನ ಅನುಮತಿ ಪಡೆಯದಿರಲು ಕಾರಣ ಹಾಗೂ ಆ ಸಂದರ್ಭದಲ್ಲಿದ್ದ ಪರಿಸ್ಥಿತಿಗಳ ಸಂಪೂರ್ಣ ವಿವರಣೆಯನ್ನು ಪೂರಕ ದಾಖಲೆಗಳೊಂದಿಗೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.
ನೋಟೀಸ್ ಸ್ವೀಕರಿಸಿದ ದಿನದಿಂದ 7 ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿ ನೀಡಲು ಗಡುವು ವಿಧಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಸೂಕ್ತ ಉತ್ತರ ಬರದಿದ್ದರೆ ತಮ್ಮಲ್ಲಿ ಯಾವುದೇ ವಿವರಣೆ ಇಲ್ಲವೆಂದು ಭಾವಿಸಿ ಕಾನೂನುಬದ್ಧವಾಗಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ರಾಜ್ಯಪಾಲರ ಸಚಿವಾಲಯ ಎಚ್ಚರಿಸಿದೆ.
The Governor’s Secretariat of Karnataka has issued a show-cause notice to Kuvempu University Vice-Chancellor Prof. Sharath Ananthamurthy for undertaking four foreign trips to Canada without prior permission. He has been given seven days to submit a written explanation supported by relevant documents.



More Stories
ಶ್ರೀರಾಮನಿಗೆ ಹನುಮಂತನಂತೆ ಯೋಗೇಶ್ ಅವರ ಅಭಿಮಾನಿ – ಎದೆಯ ಮೇಲೆ ಯೋಗೇಶ್ ಟ್ಯಾಟೂ!
‘ಬಿಯಾಂಡ್ ಬೆಂಗಳೂರು’ ಯೋಜನೆಯಲ್ಲಿ ಶಿವಮೊಗ್ಗಕ್ಕೆ ಸಿಗುವುದೇ ಸ್ಥಾನ? ಕೈಗಾರಿಕಾ ಅಭಿವೃದ್ಧಿಗೆ ಎಸ್. ರುದ್ರೇಗೌಡ ಒತ್ತಾಯ!
ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ವೇಳೆ ತೆಪ್ಪ ಬಳಸಲು ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ : ಜಿಲ್ಲಾಧಿಕಾರಿ ಆದೇಶ!