ಶಿವಮೊಗ್ಗ, Ai-ವಾರ್ತ, ಸೆಪ್ಟೆಂಬರ್ 12: ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ಅಧ್ಯಕ್ಷೆ ರೋಟೇರಿಯನ್ ರಶ್ಮಿ ಆರ್.ಎಸ್. ಅವರ ನೇತೃತ್ವದಲ್ಲಿ ನಡೆದ ವಾರದ ಸಭೆಯಲ್ಲಿ “ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆ” ಕುರಿತು ವಿಶೇಷ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಡಾ. ಗಿರೀಶ್ ಕೆ.ವಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಶಿಕ್ಷಣ ಮತ್ತು ಸಾಕ್ಷರತೆಯ ಮಹತ್ವವನ್ನು ವಿವರಿಸಿದ್ದಲ್ಲದೆ, ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಪ್ರೇರಣಾದಾಯಕವಾಗಿ ವಿಚಾರಗಳನ್ನು ಹಂಚಿಕೊಂಡರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟೇರಿಯನ್ ರಶ್ಮಿ ಆರ್.ಎಸ್. ಅವರು, ಶಿಕ್ಷಣದ ಮೂಲಕ ಮಾತ್ರವೇ ಸಶಕ್ತ ಹಾಗೂ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ಸಮಾಜದ ಪ್ರತಿಯೊಬ್ಬರಿಗೂ ಗುಣಮಟ್ಟದ ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತೆ ಸಿಗುವಂತೆ ಮಾಡಲು ರೋಟರಿ ಕ್ಲಬ್ ನಿರಂತರವಾಗಿ ಶ್ರಮಿಸಲಿದೆ ಎಂದು ಹೇಳಿದರು.
ಸಾಧಕ ಶಿಕ್ಷಕರಿಗೆ ಗೌರವ ಸನ್ಮಾನ ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗುರುತಿಸಿ ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು. ರೋಟೇರಿಯನ್ ಶ್ರೀಕಾಂತ್ ಕೆ.ವಿ., ರೋಟೇರಿಯನ್ ಜಯ ಗೋಪಾಲ, ರೋಟೇರಿಯನ್ ಯೋಗೇಶ್ ಎಂ., ಧನಂಜಯ್, ಅಕ್ಷಾ ಹಾಗೂ ಡಾ. ಗಿರೀಶ್ ಕೆ.ವಿ. ಅವರನ್ನು ಸನ್ಮಾನಿಸಲಾಯಿತು.



More Stories
ಶ್ರೀರಾಮನಿಗೆ ಹನುಮಂತನಂತೆ ಯೋಗೇಶ್ ಅವರ ಅಭಿಮಾನಿ – ಎದೆಯ ಮೇಲೆ ಯೋಗೇಶ್ ಟ್ಯಾಟೂ!
ಹತ್ತನೇ ತರಗತಿ, ಪಿಯುಸಿ ಪಾಸಾದ ಯುವತಿಯರಿಗಿಲ್ಲಿದೆ ಸುವರ್ಣಾವಕಾಶ! ಉಚಿತ ಊಟ-ವಸತಿಯೊಂದಿಗೆ ಕಲಿಯಿರಿ ನರ್ಸಿಂಗ್ ಕೋರ್ಸ್
ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಜನ್ಮದಿನ: ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಜರುಗಿದ ವಿಶೇಷ ಕಾರ್ಯಕ್ರಮವೇನು?