ಶಿವಮೊಗ್ಗ, Ai-ವಾರ್ತ, ಸೆಪ್ಟೆಂಬರ್ 11: ನಗರದ ಗೋಪಾಳಗೌಡ ಬಡಾವಣೆಯ ನಿವಾಸಿ, ಹಿರಿಯ ಯೋಗಪಟು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಕೆ.ಎಸ್. ಮೃತ್ಯುಂಜಯ (78) ಅವರು ತುಮಕೂರಿನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ರ ಅಮೆರಿಕದಿಂದ ಆಗಮಿಸಬೇಕಿರುವ ಹಿನ್ನೆಲೆಯಲ್ಲಿ ಮೃತರ ಅಂತ್ಯಕ್ರಿಯೆಯನ್ನು ಶನಿವಾರ ಸಂಜೆ ಅವರ ಹುಟ್ಟೂರಾದ ಚಿಕ್ಕನಾಯಕನಹಳ್ಳಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಯೋಗ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯ ಕೆ.ಎಸ್. ಮೃತ್ಯುಂಜಯ ಅವರು ಶಿವಗಂಗಾ ಯೋಗ ಕೇಂದ್ರದ ವಿಶ್ವಸ್ಥ ಮಂಡಳಿಯ ಸದಸ್ಯರಾಗಿ ಹಾಗೂ ಸುಮಾರು 15 ವರ್ಷಗಳ ಕಾಲ ಸಂಸ್ಥಾಪಕ ಕಾರ್ಯದರ್ಶಿಯಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅಲ್ಲದೆ, ಬ್ರದರ್ ಡಿವೈನ್ ಪಾರ್ಕ್ ಹಾಗೂ ಹಲವು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ನಿಧನದಿಂದ ಯೋಗ ಕ್ಷೇತ್ರ ಹಾಗೂ ವಿವಿಧ ಸಂಘಟನೆಗಳಲ್ಲಿ ಅಪಾರ ಶೋಕ ವ್ಯಕ್ತವಾಗಿದೆ.
ಗಣ್ಯರ ಸಂತಾಪ ಮೃತರ ನಿಧನಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ರುದ್ರಗೌಡರು, ಯೋಗಾಚಾರ್ಯ ಸೇವಾ ರುದ್ರಾರಾಧ್ಯರು, ಕಾರ್ಯದರ್ಶಿ ಚಂದ್ರಶೇಖರಯ್ಯ, ಎಸ್.ಎಸ್. ಜ್ಯೋತಿ ಪ್ರಕಾಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯ್ ಕುಮಾರ್ ಸೇರಿದಂತೆ ಯೋಗ ಶಿಕ್ಷಕರು ಹಾಗೂ ಯೋಗ ಬಂಧುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.



More Stories
ಶಿವಮೊಗ್ಗಕ್ಕೆ ಆಗಮಿಸಿದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೇಶ್: ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ!
ಶಿವಮೊಗ್ಗ: ಆಶ್ರಯ ಫಲಾನುಭವಿಗಳಿಗೆ ಹಕ್ಕುಪತ್ರ, ಮೂಲಸೌಕರ್ಯ ಒದಗಿಸಲು ಶಾಸಕ ಚನ್ನಬಸಪ್ಪ ಸೂಚನೆ!
ಹಸಿರು ಭವಿಷ್ಯದತ್ತ ರೋಟರಿ ಪರಿಸರ ಯೋಜನೆ: ಕೊಮ್ಮನಾಳು ಶಾಲೆಯಲ್ಲಿ ಅದ್ಧೂರಿ ವನಮಹೋತ್ಸವ!