AI-Vartha.in

ನಿಖರ ಸುದ್ದಿ, ನೇರ ವರದಿ

ಶಿವಮೊಗ್ಗಕ್ಕೆ ಆಗಮಿಸಿದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೇಶ್: ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ!

ಶಿವಮೊಗ್ಗ, Ai-ವಾರ್ತ, ಸೆಪ್ಟೆಂಬರ್ 11: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಹೆಚ್.ಸಿ. ಯೋಗೇಶ್ ಅವರಿಗೆ ಕೆಪಿಸಿಸಿ, ಜಿಲ್ಲಾ NSUI ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ನಗರದ ಡಿವಿಎಸ್ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಹೆಚ್.ಸಿ. ಯೋಗೇಶ್ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ವೇಳೆ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಯುವ ಕಾರ್ಯಕರ್ತರು ಅವರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು: ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗ್ಡೆ, ಎಸ್.ಪಿ. ದಿನೇಶ್, ಕಾಶಿ ವಿಶ್ವನಾಥ್, ಯಮುನಾ ರಂಗೇಗೌಡ, ಸೈಯದ್, ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಜವಳಿ ನಿಗಮದ ಅಧ್ಯಕ್ಷ ಚೇತನ್, ಮುಖಂಡರಾದ ಚಿರಂಜೀವಿ ಬಾಬು, ಮಧುಸೂದನ್ ಹಾಗೂ ಗಿರೀಶ್ ಉಪಸ್ಥಿತರಿದ್ದರು.

ಜೊತೆಗೆ NSUI ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ಕಾಟಿಕೆರೆ ರವಿ, ನಗರಾಧ್ಯಕ್ಷ ರವಿಕುಮಾರ್, ಚಂದ್ರೋಜಿ ರಾವ್ ಸುಭಾನ, ಫಾರಾಜ್, ಆದಿತ್ಯ, ಶ್ರೀಕಾಂತ್, ಪಂಕಜ್ ಹಾಗೂ ಯುವ ಕಾಂಗ್ರೆಸ್ ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಸತ್ತಾರ್, ಆಕಾಶ್, ಮಲಗೊಪ್ಪ ಶಿವು, ಬಾಬು, ತೋಫಿಕ್ ಸೇರಿದಂತೆ ಹಲವು ಯುವ ನಾಯಕರು ಉಪಸ್ಥಿತರಿದ್ದರು.

Upon arriving in Shivamogga for the first time after being appointed as the Shivamogga District Congress President, H.C. Yogesh was warmly welcomed by NSUI and Youth Congress workers. He offered floral tributes to the Basavanna statue at DVS Circle in the presence of several senior Congress leaders and party office-bearers.