ಶಿವಮೊಗ್ಗ : Ai-ವಾರ್ತಾ, ಅಕ್ಟೋಬರ್ 1
ಹಸಿರು ತಂತ್ರಜ್ಞಾನ ಹಾಗೂ ಇಂಧನ ಉಳಿತಾಯದ ಮಾತುಗಳನ್ನು ನಂಬಿ ಲಕ್ಷಾಂತರ ರೂಪಾಯಿ ತೆತ್ತು ‘ಓಲಾ’ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ರೈತನೊಬ್ಬ ಇದೀಗ ಸಂಸ್ಥೆಯ ಕಳಪೆ ಸರ್ವಿಸ್ ಹಾಗೂ ಶೋರೂಂ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮೂರು ತಿಂಗಳ ಹಿಂದೆ ಪಡೆದ ವಾಹನ ದುರಸ್ತಿಗೆ ಬಿದ್ದು ಒಂದೂವರೆ ತಿಂಗಳು ಕಳೆದರೂ ಸರಿಪಡಿಸಿಕೊಡದೆ ಓಲಾ ಕಂಪನಿ ವಂಚಿಸುತ್ತಿದೆ ಎಂದು ಹಾವೇರಿ ಜಿಲ್ಲೆಯ ರೈತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆ ರಟ್ಟಹಳ್ಳಿ ತಾಲೂಕಿನ ಅಣಜಿ ಗ್ರಾಮದ ನಿವಾಸಿ, ಕೃಷಿಕ ಶಿವಕುಮಾರ್ (ಫೋನ್: 9945896238) ಈ ರೀತಿ ಓಲಾ ಕಂಪನಿಯ ನೆಪಗಳಿಂದ ಕಂಗಾಲಾದ ದುರ್ದೈವಿ. ಶಿವಮೊಗ್ಗ ನಗರದ ಶಂಕರ್ ಮಠ ಸರ್ಕಲ್ ಬಳಿ ಇರುವ ಓಲಾ ಅಧಿಕೃತ ಶೋರೂಂನಲ್ಲಿ 1.21 ಲಕ್ಷ ರೂಪಾಯಿ ನಗದು ಪಾವತಿಸಿ ಇ-ಸ್ಕೂಟರ್ ಖರೀದಿಸಿದ್ದರು. ಆದರೆ, ವಾಹನ ಸಣ್ಣ ಮಟ್ಟದಲ್ಲಿ ಕೆಳಗೆ ಬಿದ್ದು ಚಾಸಿಸ್ ಬಾಗಿದ್ದರಿಂದ, ವಿಮೆ ಹಾಗೂ ವಾರಂಟಿ ಸೌಲಭ್ಯವಿದ್ದರೂ ವಾಹನವನ್ನು ಸ್ವಂತ ಖರ್ಚಿನಲ್ಲಿ ₹3,000 ಬಾಡಿಗೆ ಲಗೇಜ್ ಆಟೋ ಮೂಲಕ ಶಿವಮೊಗ್ಗ ಶೋರೂಂಗೆ ತಂದು ಬಿಟ್ಟಿದ್ದರು.
ಅತ್ತ ಇ-ವಾಹನವೂ ಇಲ್ಲ, ಇತ್ತ ಕೃಷಿಯೂ ಇಲ್ಲ: “ವಾಹನ ಶೋರೂಂಗೆ ಕೊಟ್ಟು ಒಂದೂವರೆ ತಿಂಗಳು ಕಳೆಯಿತು. ದಿನವೂ ‘ಇವತ್ತು ಬನ್ನಿ, ನಾಳೆ ಬನ್ನಿ’, ‘ಮ್ಯಾನೇಜರ್ ಇಲ್ಲ’, ‘ಬೇರೆ ಬ್ರಾಂಚ್‌ಗೆ ಹೋಗಿ’ ಎಂದು ಸಿಬ್ಬಂದಿ ಸಾಗಾಕುತ್ತಿದ್ದಾರೆ. ನಮ್ಮ ಊರಿನಿಂದ ಶಿವಮೊಗ್ಗ 70 ಕಿಲೋಮೀಟರ್ ದೂರದಲ್ಲಿದೆ. ಪ್ರತಿಯೊಮ್ಮೆ ಬಂದು ಹೋಗಲು ಪ್ರಯಾಣ ಮತ್ತು ಊಟದ ವೆಚ್ಚ ಸೇರಿ ₹350ಕ್ಕೂ ಹೆಚ್ಚು ಖರ್ಚಾಗುತ್ತಿದೆ. ಜಮೀನು ಕೆಲಸ ಬಿಟ್ಟು ಅಲೆದಾಡುವುದೇ ಕೆಲಸವಾಗಿದೆ,” ಎಂದು ರೈತ ಶಿವಕುಮಾರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬಿಡಿಭಾಗಗಳ ಕಳವು ಶಂಕೆ – ಧರಣಿ ಎಚ್ಚರಿಕೆ: “ಸ್ವಲ್ಪ ಹೆಚ್ಚು ಹಣವಾದರೂ ಪೆಟ್ರೋಲ್ ಗಾಡಿಯನ್ನೇ ಪಡೆಯಬೇಕಿತ್ತು, ಯಾರೋ ಮಾತು ಕೇಳಿ ಓಲಾ ತೆಗೆದುಕೊಂಡು ಮೋಸ ಹೋದೆ. ನನ್ನ ಸರ್ವಿಸ್‌ಗೆ ನಿಲ್ಲಿಸಿದ ವಾಹನದ ಬಿಡಿಭಾಗಗಳನ್ನು ಬಿಚ್ಚಿ ಬೇರೆ ವಾಹನಗಳಿಗೆ ಅಳವಡಿಸುತ್ತಿದ್ದಾರೆ ಎಂಬ ಬಲವಾದ ಅನುಮಾನವಿದೆ. ತಕ್ಷಣವೇ ನನ್ನ ಸ್ಕೂಟರ್ ದುರಸ್ತಿ ಮಾಡಿಕೊಡಬೇಕು, ಇಲ್ಲವೇ ನಾನು ಪಾವತಿಸಿದ 1.21 ಲಕ್ಷ ರೂ. ಹಣವನ್ನು ವಾಪಸ್ ನೀಡಬೇಕು. ಇಲ್ಲವಾದಲ್ಲಿ ಶೋರೂಂ ಮುಂಭಾಗದಲ್ಲೇ ಧರಣಿ ಕುಳಿತು ಹೋರಾಟ ನಡೆಸಲಿದ್ದೇನೆ,” ಎಂದು ಅವರು ಎಚ್ಚರಿಸಿದ್ದಾರೆ.
Shivakumar, a farmer from Haveri district, has alleged severe service neglect by the Ola Electric showroom near Shankar Mutt Circle in Shivamogga. Despite handing over his ₹1.21 lakh e-scooter for repairs six weeks ago, the showroom has failed to service it, prompting the farmer to demand an immediate fix, a full refund, or face a public protest.



More Stories
ಶಿವಮೊಗ್ಗ: ಕೆಆರ್ಪುರಂ ಕೆಪಿಎಸ್ ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಟೈ-ಬೆಲ್ಟ್ ವಿತರಣೆ!
ಬುಕ್ ಮಾಡಿದ್ದೇ ಒಂದು, ಕಳುಹಿಸಿದ್ದೇ ಇನ್ನೊಂದು: ಫ್ಲಿಪ್ಕಾರ್ಟ್ಗೆ ₹35,000 ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ಆಯೋಗ!
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಸಾರಥಿ: ‘ಸ್ಬೂಡಾ’ ಅಧ್ಯಕ್ಷರಾಗಿ ಸಿ.ಜಿ. ಮಧುಸೂದನ್ ನೇಮಕ