ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಾಗೂ ರಾಷ್ಟ್ರೀಯ ಹೆದ್ದಾರಿ ಮಾರ್ಗದ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಶಿವಮೊಗ್ಗ, ಸೆ.03: ನಗರ ಉಪ ವಿಭಾಗ 2ರ ವ್ಯಾಪ್ತಿಗೆ ಒಳಪಡುವ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2 ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಮಾರ್ಗದ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿಯನ್ನು ಸೆಪ್ಟೆಂಬರ್ 06 ರಂದು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 06 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ (MESCOM) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಪಿಯರ್‌ಲೈಟ್, ಗಾಜನೂರು ರೂರಲ್, ಊರುಗಡೂರು, ರಾಮಿನಕೊಪ್ಪ, ಗೋಪಿಶೆಟ್ಟಿಕೊಪ್ಪ, ಇಲಿಯಾಸ್ ನಗರ 1 ರಿಂದ 14ನೇ ತಿರುವು, ಚಾಲುಕ್ಯನಗರ 1 ರಿಂದ 21ನೇ ತಿರುವು, ಕೆ.ಹೆಚ್.ಬಿ. ಕಾಲೋನಿ, ಸಿದ್ದೇಶ್ವರ ಸರ್ಕಲ್ 100 ಅಡಿ ರಸ್ತೆ, ಮಂಡ್ಲಿ, ಎನ್.ಟಿ.ರಸ್ತೆ, ಮಾರ್ನಾಮಿಬೈಲು, ಗಂಧರ್ವನಗರ, ಹಳೆ ಮಂಡ್ಲಿ, ವಾದಿಹುದಾ, ಸೂಳೆಬೈಲು, ಮದಾರಿಪಾಳ್ಯ, ಕಲ್ಲೂರಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್. ನೀರು ಶುದ್ಧೀಕರಣ ಘಟಕ, ಕುರುಬರ ಪಾಳ್ಯ, ಸವಾಯಿಪಾಳ್ಯ, ಮುರಾದ್‌ನಗರ, ಓ.ಟಿ.ರಸ್ತೆ, ಬಿ.ಬಿ.ರಸ್ತೆ, ಕುಂಬಾರಕೇರಿ, ವಂದನ ಟಾಕೀಸ್ ಸುತ್ತಮುತ್ತ, ಆರ್.ಎಂ.ಎಲ್.ನಗರ 1 ಮತ್ತು 2ನೇ ಹಂತ, ಎಲ್.ಎಲ್.ಆರ್.ರಸ್ತೆ, ಜೆ.ಸಿ.ನಗರ, ಎಲ್.ಎಲ್.ಬಿ.ರಸ್ತೆ, ದುರ್ಗಿಗುಡಿ, ನೆಹರು ರಸ್ತೆ ಎಡಭಾಗ.
ಗಾರ್ಡನ್ ಏರಿಯಾ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ, ಆನಂದ್ ರಾವ್ ಬಡಾವಣೆ, ಮಂಜುನಾಥ ಬಡಾವಣೆ, ಟಿಪ್ಪುನಗರ, ಮಿಳಘಟ್ಟ, ಅಣ್ಣಾನಗರ, ತಿಮ್ಮಪ್ಪನಕೊಪ್ಪಲು, ಕೆ.ಆರ್.ಪುರಂ, ಸಿದ್ದಯ್ಯರಸ್ತೆ, ಗಾಂಧಿಬಜಾರ್, ಕುಂಬಾರ ಗುಂಡಿ, ಉಪ್ಪಾರ್ ಕೇರಿ, ಎಂ.ಎಂ.ಕೆ. ರಸ್ತೆ, ಬರಮಪ್ಪನಗರ, ಹರಳೆಣ್ಣೆ ಕೇರಿ, ಬಿ.ಹೆಚ್.ರಸ್ತೆ ಸುತ್ತಮುತ್ತ.
ಅಲ್ಲದೆ ಎಂ.ಎಫ್ -4, 9, 14, 16 ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಪೇಪರ್ ಪ್ಯಾಕೇಜ್, ಕಲ್ಲೂರು ಮಂಡ್ಲಿ ಇಂಡಸ್ಟ್ರೀಯಲ್ ಏರಿಯಾ, ಶಂಕರ ಕಣ್ಣಿನ ಆಸ್ಪತ್ರೆ, ಎನ್.ಹೆಚ್.ಆಸ್ಪತ್ರೆ, ಶಾರದನಗರ, ಅನ್ನಪೂರ್ಣೇಶ್ವರಿ ಬಡಾವಣೆ, ಮಲ್ನಾಡ್ ಕೋಕ್, ಗಂಧರ್ವನಗರ, ಹಳೆ ಮಂಡ್ಲಿ 1ನೇ ಕ್ರಾಸ್, ಇಲಿಯಾಜ್ ನಗರ, ಹರಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ವಿನಂತಿಸಿದೆ.
Power supply will be disrupted in several parts of Shivamogga city on September 6 from 10:00 AM to 6:00 PM. MESCOM announced that the outage is due to quarterly maintenance work at the Mandli power distribution center and the shifting of electric poles along the national highway.



More Stories
ಪ್ಲೇಟ್ಲೆಟ್ಸ್ ದಾನ ಮಾಡಿ ಜೀವ ಉಳಿಸಿದ ಶಿವಮೊಗ್ಗ ಸೈಬರ್ ಪೊಲೀಸ್ ಅರವಿಂದ್: ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೆಚ್ಚುಗೆ
ಸೂಡಾ ನೂತನ ಸದಸ್ಯ ಶಶಾಂಕ್ ಸಜ್ಜನ್ಗೆ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನ
ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಕೆ.ಎಸ್. ಈಶ್ವರಪ್ಪ