ಶಿವಮೊಗ್ಗ, ಸೆ.04: “ಶಾಸಕ ಚನ್ನಬಸಪ್ಪ ನಮ್ಮ ಹುಡುಗ, ಅವರ ಹೇಳಿಕೆಯನ್ನು ನೀವು ಸೀರಿಯಸ್ಸಾಗಿ ತಗೋಬೇಡಿ. ಹಿಂದುತ್ವ ಉಳಿಸುವ ಹೊತ್ತಲ್ಲಿ ರಾಜಕಾರಣವೂ ಬರುತ್ತೆ, ಏನೋ ಅವನ ಬಾಯಲ್ಲಿ ಬಂದಿದೆ,” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ತಮ್ಮ ಸ್ಪರ್ಧೆಯ ಕುರಿತು ಸ್ಪಷ್ಟನೆ ನೀಡಿದರು. “ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಎಲ್ಲರೊಂದಿಗೂ ಕುಳಿತು ಸಮಾಲೋಚನೆ ನಡೆಸಿದ ನಂತರವೇ ಈ ಸ್ಪರ್ಧೆಯ ನಿರ್ಧಾರ ಕೈಗೊಂಡಿದ್ದೇವೆ. ಬಿಜೆಪಿ ರಾಜ್ಯ ನಾಯಕರಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ, ಅವರ ತೀರ್ಮಾನ ಏನೆಂದು ಮುಂದೆ ಗೊತ್ತಾಗಲಿದೆ,” ಎಂದರು.
ಅಪ್ಪ ಅಥವಾ ಮಗನ ಸ್ಪರ್ಧೆ ಖಚಿತ: ಸ್ಪರ್ಧೆಯ ವಿಚಾರವಾಗಿ ಮತ್ತಷ್ಟು ಮಾತನಾಡಿದ ಅವರು, “ಚುನಾವಣೆಯಲ್ಲಿ ಅಪ್ಪ ನಿಲ್ಲುವರೋ ಅಥವಾ ಮಗ ನಿಲ್ಲುವರೋ ಎಂಬುದನ್ನು ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ. ಪ್ರಕ್ರಿಯೆಗಳು ಈಗಷ್ಟೇ ಆರಂಭವಾಗಿವೆ. ಯಾವುದೇ ಕಾರಣಕ್ಕೂ ನಮ್ಮನ್ನು ಕೈಬಿಡುವುದಿಲ್ಲ ಎಂದು ಕ್ಷೇತ್ರದ ಎಲ್ಲಾ ವರ್ಗದ ಜನ ಭರವಸೆ ನೀಡಿದ್ದಾರೆ. ಜನರ ಪ್ರೀತಿ ಮತ್ತು ಬೆಂಬಲದಂತೆ ನಮ್ಮ ಸ್ಪರ್ಧೆ ಖಚಿತ,” ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.



More Stories
ಸಾಗರ: ಡಾ. ಜಿ.ಎ. ನಾರಿ ಬೋಲಿ ಕಾಲೇಜಿನಲ್ಲಿ ‘ಯುವ ಮನಸ್ಸುಗಳಲ್ಲಿ ಕೃಷಿ ಚಿಂತನೆ’ ಸಂವಾದ ಕಾರ್ಯಕ್ರಮ
ಶಿವಮೊಗ್ಗ: ಡಾ. ಶರತ್ ಮರಿಯಪ್ಪ ಫೌಂಡೇಶನ್ನಿಂದ ಉಚಿತ ‘ಉದ್ಯೋಗ ಪಥ’ ತರಬೇತಿ; ಸೆ.10ಕ್ಕೆ ಚಾಲನೆ
ಕಾರ್ಪೋರೇಟ್ ಆಸ್ಪತ್ರೆಗಳಿಗಿಂತ ಸ್ಥಳೀಯ ಆಸ್ಪತ್ರೆಗಳ ಸೇವೆ ಜನಸ್ನೇಹಿ: ಡಾ. ಸಿ.ಜಿ. ರಾಘವೇಂದ್ರ ವೈಲಾಯ