ಶಿವಮೊಗ್ಗ, ಸೆ.05: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ನೆರವಾಗುವ ಉದ್ದೇಶದಿಂದ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ‘ಉದ್ಯೋಗ ಪಥ’ ಶೀರ್ಷಿಕೆಯಡಿ ಎರಡು ತಿಂಗಳ ಉಚಿತ ಆಫ್‌ಲೈನ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ತರಬೇತಿ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 10ರಂದು ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಚಾಲನೆ ನೀಡಲಾಗುವುದು ಎಂದು ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಮ್ಮ ಕನಸು, ನಮ್ಮ ಸಂಕಲ್ಪ’ ಎಂಬ ಘೋಷವಾಕ್ಯದೊಂದಿಗೆ ಈ ಬೃಹತ್ ತರಬೇತಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್, ಬೆಂಗಳೂರಿನ ಸ್ಪರ್ಧಾ ಅರಿವು ಅಕಾಡೆಮಿ ಹಾಗೂ ಶಿಕಾರಿಪುರದ ಸಾಧನಾ ಅಕಾಡೆಮಿ ಸಂಸ್ಥೆಗಳು ಸಹಯೋಗ ನೀಡಿವೆ ಎಂದು ವಿವರಿಸಿದರು.
72 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅನುಕೂಲ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 72 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದ್ದು, ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಪರೀಕ್ಷೆಗಳು ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನರಿಗೆ ಪೂರ್ವಸಿದ್ಧತೆಯಾಗಿ ಕೆಎಎಸ್ (KAS), ಕೆಪಿಎಸ್‌ಸಿ (KPSC), ಎಫ್‌ಡಿಎ (FDA), ಎಸ್‌ಡಿಎ (SDA), ಪಿಎಸ್‌ಐ (PSI), ಪಿಸಿ (PC), ಕೆಇಎ ಗ್ರೂಪ್–ಸಿ ಹಾಗೂ ಪಿಎಸ್‌ಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಹಾಗೂ ವಿಷಯಾಧಾರಿತ ಮಾರ್ಗದರ್ಶನ ನೀಡಲಾಗುವುದು ಎಂದರು.
ಸಾಧಕರಿಂದ ಮಾರ್ಗದರ್ಶನ: ಉದ್ಘಾಟನಾ ಸಮಾರಂಭದಲ್ಲಿ ಶಿಕಾರಿಪುರದ ಸಾಧನಾ ಅಕಾಡೆಮಿಯ ಬಿ. ಮಂಜುನಾಥ್, ಬೆಂಗಳೂರಿನ ಸ್ಪರ್ಧಾ ಅರಿವು ಅಕಾಡೆಮಿಯ ಪಿ.ವಿ. ಬೈರಪ್ಪ (ಐಆರ್‌ಎಸ್) ಹಾಗೂ ವಿವಿಧ ಸರ್ಕಾರಿ ನೇಮಕಾತಿಯ 16 ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಕಿಟ್ಟಿ ಸರ್ (ಪಿಎಸ್‌ಐ) ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅಭ್ಯರ್ಥಿಗಳಿಗೆ ಪರೀಕ್ಷಾ ತಂತ್ರಗಾರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಮೂಡಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ವೆಂಕಟೇಶ್, ನಳಿನಾ ಜಾದವ್, ಮಂಜುನಾಥ್, ಅಭಿರಾಮ್, ಪೃಥ್ವಿಶ್ರೀ, ರವಿದರ್ಶನ್ ಹಾಗೂ ಧಾನಿಯಾ ಸಫಾ ಉಪಸ್ಥಿತರಿದ್ದರು.
Dr. Sharath Mariappa Foundation announced ‘Udyoga Patha’, a two-month free offline coaching program for competitive exams starting September 10 at Kuvempu Ranga Mandira, Shivamogga. Organized in collaboration with leading coaching academies, the initiative aims to train aspirants for over 72,000 government job vacancies, covering exams like KAS, KPSC, PSI, and KEA.



More Stories
ಸಾಗರ: ಡಾ. ಜಿ.ಎ. ನಾರಿ ಬೋಲಿ ಕಾಲೇಜಿನಲ್ಲಿ ‘ಯುವ ಮನಸ್ಸುಗಳಲ್ಲಿ ಕೃಷಿ ಚಿಂತನೆ’ ಸಂವಾದ ಕಾರ್ಯಕ್ರಮ
ಕಾರ್ಪೋರೇಟ್ ಆಸ್ಪತ್ರೆಗಳಿಗಿಂತ ಸ್ಥಳೀಯ ಆಸ್ಪತ್ರೆಗಳ ಸೇವೆ ಜನಸ್ನೇಹಿ: ಡಾ. ಸಿ.ಜಿ. ರಾಘವೇಂದ್ರ ವೈಲಾಯ
ಅಧ್ಯಯನಶೀಲ ಶಿಕ್ಷಕರಿಂದ ಮಾತ್ರ ಉತ್ತಮ ಶಿಷ್ಯರ ಸೃಷ್ಟಿ ಸಾಧ್ಯ – ಡಾ. ಗಾಯತ್ರಿದೇವಿ ಸಜ್ಜನ್