ಶಿವಮೊಗ್ಗ, ಸೆ.05: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರೂ, ಶಿವಮೊಗ್ಗದ ಬರಹಗಾರ್ತಿ ಹಾಗೂ ಸಂಘಟಕಿಯೂ ಆಗಿರುವ ಡಾ. ಹಸೀನಾ ಎಚ್.ಕೆ. ಅವರಿಗೆ ಪ್ರತಿಷ್ಠಿತ ‘ರಾಷ್ಟ್ರೀಯ ಗಝಲ್ ರತ್ನ’ ಪ್ರಶಸ್ತಿ ಲಭಿಸಿದೆ.
ಕನ್ನಡ ಗಝಲ್ ರಚನೆ, ಅಧ್ಯಯನ, ವಿಮರ್ಶೆ, ಉಪನ್ಯಾಸ ಹಾಗೂ ಹಲವು ಗಝಲ್ ಸಂಬಂಧಿತ ಸಮ್ಮೇಳನಗಳ ಯಶಸ್ವಿ ಆಯೋಜನೆಯ ಮೂಲಕ ಕನ್ನಡ ಗಝಲ್ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಡಾ. ಹಸೀನಾ ಅವರಿಗೆ ಈ ಗೌರವ ಲಭಿಸಿದೆ.
ಸೆಪ್ಟೆಂಬರ್ 6 ರಂದು ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ:
ಅಕ್ಷರ ದೀಪ ಫೌಂಡೇಶನ್ ಗದಗ ಹಾಗೂ ಸರ್ವ ಗಝಲ್ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 6 ರಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಅವರಿಗೆ “ರಾಷ್ಟ್ರೀಯ ಗಝಲ್ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗುವುದು ಎಂದು ಸರ್ವಾಧ್ಯಕ್ಷರಾದ ಡಾ. ಶ್ರೀಶೈಲ ಮಾದಣ್ಣನವರ ತಿಳಿಸಿದ್ದಾರೆ.
ಡಾ. ಹಸೀನಾ ಅವರಿಗೆ ಈ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿರುವುದಕ್ಕೆ ಅವರ ಅಭಿಮಾನಿ ಬಳಗ ಹಾಗೂ ಸಾಹಿತ್ಯಾಸಕ್ತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
Dr. Haseena H.K., District President of Kendra Kannada Sahitya Vedike and a prominent writer from Shivamogga, has been selected for the ‘National Ghazal Ratna Award’ for her contributions to Kannada Ghazal writing, research, and event organization. The award will be presented on September 6 at the District Kannada Sahitya Bhavan in Dharwad by Akshara Deepa Foundation and Sarva Ghazal Vedike.



More Stories
ಸಭಾಪತಿ ಸಲೀಂ ಅಹಮದ್ಗೆ ಶಿವಮೊಗ್ಗದಲ್ಲಿ ಸನ್ಮಾನ: ನಾನೀಗ ಪಕ್ಷಾತೀತ
ಗೋಡ್ಸೆಯನ್ನು ಭಯೋತ್ಪಾದಕನೆಂದು ಬಿಜೆಪಿ ಒಪ್ಪಲಿ: ಹರಿಪ್ರಸಾದ್ ಆಗ್ರಹ
SSLC-PUC ಪರೀಕ್ಷೆ ಮುಂದೂಡಿಕೆ ಸಾಧ್ಯತೆ: ಜನಗಣತಿ ಕಾರಣ, ಇಲಾಖೆಗೆ ಪತ್ರ