ಶಿವಮೊಗ್ಗ: ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್ ವತಿಯಿಂದ ನಗರದ ಶಾಮ ಧಾಮ ಹಿರಿಯ ನಾಗರಿಕರ ಆಶ್ರಮದಲ್ಲಿ ‘ಸಂವಾದ–ಒಡನಾಟ ಮತ್ತು ಸಂತೋಷದ ದಿನ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 35 ಹಿರಿಯ ನಾಗರಿಕರು ಹಾಗೂ 20ಕ್ಕೂ ಹೆಚ್ಚು ಆರೈಕೆದಾರರೊಂದಿಗೆ ಕ್ಲಬ್ ಸದಸ್ಯರು ಆತ್ಮೀಯವಾಗಿ ಸಮಯ ಕಳೆಯುವ ಮೂಲಕ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ಹಿರಿಯ ನಾಗರಿಕರು ತಮ್ಮ ಜೀವನಾನುಭವ, ಸ್ಮರಣೀಯ ಘಟನೆಗಳು ಹಾಗೂ ಸಾಧನೆಗಳನ್ನು ಹಂಚಿಕೊಂಡು ಗಮನ ಸೆಳೆದರು.
ಇದೇ ವೇಳೆ ಕೆಲ ಹಿರಿಯರು ಗಾಯನ, ನೃತ್ಯ ಹಾಗೂ ಬರವಣಿಗೆಯ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಬಳಿಕ ಆಯೋಜಿಸಲಾದ ಬುದ್ಧಿಶಕ್ತಿ ಚಟುವಟಿಕೆಗಳು ಹಾಗೂ ಮನರಂಜನಾ ಆಟಗಳಲ್ಲಿ ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು.
ಆಶ್ರಮದ ನಿವಾಸಿಗಳಿಗೆ ಟವೆಲ್ಗಳು ಮತ್ತು ಬಿಸ್ಕತ್ಗಳನ್ನು ವಿತರಿಸಲಾಯಿತು. ವಿವಿಧ ಆಟಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಎ.ಸಿ. ಸದಸ್ಯೆ ಶಬರಿ ಕಡಿದಾಳ್, ಅಧ್ಯಕ್ಷೆ ಮಮತಾ ಸುಧೀಂದ್ರ, ಕಾರ್ಯದರ್ಶಿ ನಿರ್ಮಲಾ ಕೆ.ಪಿ., ಉಪಾಧ್ಯಕ್ಷೆ ಗೀತಾ ಬಸವಕುಮಾರ್, ಪಿ.ಆರ್.ಓ. ಬಿಂದು ವಿಜಯಕುಮಾರ್, ಮಾಜಿ ಅಧ್ಯಕ್ಷೆ ಜಯಂತಿ ವಾಲಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಮಾ ಮಂಜುನಾಥ್, ಲತಾ ಶಂಕರ್, ವಸಂತಿ ಮತ್ತು ವಿಜಯಾ ಜವಳಿ ಉಪಸ್ಥಿತರಿದ್ದರು.

ಹಿರಿಯರೊಂದಿಗೆ ಸಮಯ ಕಳೆಯುವುದು, ಅವರ ಜೀವನಾನುಭವಗಳನ್ನು ಆಲಿಸುವುದು ಹಾಗೂ ಅವರೊಂದಿಗೆ ಸಂತೋಷ ಹಂಚಿಕೊಳ್ಳುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಆತ್ಮೀಯ ಸಂವಾದ ಮತ್ತು ಒಡನಾಟದ ಮೂಲಕ ನಡೆದ ಈ ಕಾರ್ಯಕ್ರಮ ಹಿರಿಯ ನಾಗರಿಕರು ಹಾಗೂ ಕ್ಲಬ್ ಸದಸ್ಯರಲ್ಲಿ ಸಂತೋಷ ಮತ್ತು ಸಾರ್ಥಕತೆಯ ಭಾವ ಮೂಡಿಸಿತು. ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
Inner Wheel Club Shivamogga East organised an interaction and fellowship programme with senior citizens, creating moments of joy through conversations, activities, games and cultural performances.



More Stories
ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ: ವಕೀಲರ ಧರಣಿಗೆ ರೈತ ಸಂಘದ ಬೆಂಬಲ
ಮಧ್ವಾಚಾರ್ಯರ ಜಯಂತಿ ಆದೇಶ ಸ್ವಾಗತ, ರಾಮಾನುಜ ಜಯಂತಿಗೂ ಆಗ್ರಹ
ದಸರಾ ಮಹಿಳಾ ಸದೃಢತೆ, ಸಮನ್ವಯತೆ, ಸಮೃದ್ಧಿಯ ಪ್ರತೀಕ: ಶ್ರೀರಂಜಿನಿ