ಶಿವಮೊಗ್ಗ, ಸೆ.05: ನಗರದ ಮಲ್ಲಿಗೇನಹಳ್ಳಿ ಬಡಾವಣೆಯಲ್ಲಿರುವ ಡಿ. ದೇವರಾಜು ಅರಸು ವಿದ್ಯಾರ್ಥಿ ನಿಲಯಕ್ಕೆ ಊಟದ ಸಮಯದಲ್ಲಿ ತಹಶೀಲ್ದಾರ್ ರಾಜೀವ್ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದ ಹಾಲ್‌ನಲ್ಲೇ ಬೀದಿ ನಾಯಿಗಳು ಕಂಡುಬಂದಿದ್ದು, ಇದನ್ನು ನೋಡಿ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ತಹಶೀಲ್ದಾರ್ ರಾಜೀವ್ ಅವರು ಊಟ ಮಾಡುತ್ತಿದ್ದ ವಿದ್ಯಾರ್ಥಿಗಳ ಬಳಿ ತೆರಳಿ ನೇರವಾಗಿ ಸಮಾಲೋಚನೆ ನಡೆಸಿದ್ದು, ಹಾಸ್ಟೆಲ್‌ನಲ್ಲಾಗುತ್ತಿರುವ ಮೂಲಸೌಕರ್ಯಗಳ ಕೊರತೆ ಹಾಗೂ ಆಹಾರದ ಗುಣಮಟ್ಟದ ಕುರಿತು ಮಾಹಿತಿ ಪಡೆದರು.
ವಾರ್ಡನ್‌ಗೆ ಕ್ಲಾಸ್ ಹಾಗೂ ತೀವ್ರ ಎಚ್ಚರಿಕೆ: ಪರಿಶೀಲನೆಯ ವೇಳೆಯಲ್ಲಿ ಹಾಸ್ಟೆಲ್ ವಾರ್ಡನ್ ಗೈರುಹಾಜರಾಗಿರುವುದು ಕಂಡುಬಂದಿದೆ. ಇದರಿಂದ తీవ్ర ಅಸಮಾಧಾನ ವ್ಯಕ್ತಪಡಿಸಿದ ತಹಶೀಲ್ದಾರ್ ರಾಜೀವ್, “ವಾರ್ಡನ್ ಇಲ್ಲದೆ ವಿದ್ಯಾರ್ಥಿಗಳಿಗೆ ಊಟವನ್ನು ಯಾರು ಬಡಿಸುತ್ತಾರೆ?” ಎಂದು ಪ್ರಶ್ನಿಸಿ ಸ್ಥಳದಲ್ಲಿದ್ದವರ ವಿರುದ್ಧ ಗರಂ ಆದರು. ತಕ್ಷಣವೇ ವಾರ್ಡನ್‌ಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡ ಅಧಿಕಾರಿಗಳು, ಹಾಸ್ಟೆಲ್‌ನ ಎಲ್ಲಾ ವ್ಯವಸ್ಥೆಗಳು ನಿಯಮಗಳ ಪ್ರಕಾರವೇ ನಡೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
Shivamogga Tahsildar Rajeev conducted a surprise inspection at the D. Devaraj Urs Student Hostel in Malligenahalli during mealtimes. Officials were shocked to find stray dogs inside the dining hall while students were eating. The Tahsildar questioned the students, expressed anger over the warden’s absence, and summoned the warden to issue a strict warning to maintain proper standards.



More Stories
ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ‘ಹರ್ಷ ಆರ್ಕೇಡ್’ ಕಟ್ಟಡದ ಮೊದಲನೇ ಮಹಡಿಯಲ್ಲಿ 2,150 ಚದರ ಅಡಿಯ ಬೃಹತ್ ಹಾಲ್ ಬಾಡಿಗೆಗೆ ಲಭ್ಯವಿದೆ.
ಶಿವಮೊಗ್ಗದ ವಾಸವಿ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆ: ಕೆ.ಎಸ್. ಈಶ್ವರಪ್ಪ ಚಾಲನೆ
ಇಂಟರಾಕ್ಟ್ ಕ್ಲಬ್ಗಳು ಮುಂದಿನ ಪೀಳಿಗೆಯ ರೋಟೇರಿಯನ್ನರನ್ನು ರೂಪಿಸುತ್ತವೆ: ವರ್ಷಿಣಿ