ಶಿವಮೊಗ್ಗ: ಸಾರ್ವಜನಿಕರಲ್ಲಿ ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ವತಿಯಿಂದ ಸ್ವಾಗತ ಫಲಕ ಅಳವಡಿಸುವ ಮೂಲಕ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಅಳವಡಿಸಲಾದ ಫಲಕದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಕಾರಿನಲ್ಲಿ ಸೀಟ್ಬೆಲ್ಟ್ ಬಳಸುವುದು, ಸಂಚಾರ ಸಂಕೇತಗಳನ್ನು ಪಾಲಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ಫೋನ್ ಬಳಸದಿರುವುದು, ವೇಗದ ಮಿತಿಯನ್ನು ಕಾಪಾಡುವುದು ಹಾಗೂ ಪಾದಚಾರಿಗಳಿಗೆ ಆದ್ಯತೆ ನೀಡುವ ಕುರಿತು ಸಾರ್ವಜನಿಕರಿಗೆ ಮಹತ್ವದ ಸುರಕ್ಷತಾ ಸಂದೇಶಗಳನ್ನು ನೀಡಲಾಗಿದೆ.
ಕಾರ್ಯಕ್ರಮವನ್ನು ಜೆಸಿಐ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಭರತ್ ಎನ್. ಆಚಾರ್ಯ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಹಾಗೂ ಜವಾಬ್ದಾರಿಯುತ ವಾಹನ ಚಾಲನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ಕಾರ್ಯವನ್ನು ಶ್ಲಾಘಿಸಿದರು.
ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಜೆಎಫ್ಎಸ್ ಮಧುಸೂದನ್ ನಾವಡ, ಟೂರ್ ಕೋಆರ್ಡಿನೇಟರ್ ಜೆಸಿ ಅಭಿಜಿತ್ ಹಿರಿಯ, ವಲಯ ಉಪಾಧ್ಯಕ್ಷ ಜೆಎಫ್ಎಸ್ ಆದರ್ಶ ಸರಾಫ್, ಘಟಕದ ಸಂಸ್ಥಾಪಕ ಅಧ್ಯಕ್ಷ ಜೆಎಫ್ಎಸ್ ಸುದರ್ಶನ್ ತಾಯಿಮನೆ, ಅಧ್ಯಕ್ಷೆ ಜೆಎಫ್ಡಿ ಗಾನವಿ, ಕಾರ್ಯದರ್ಶಿಗಳಾದ ಜೆಸಿ ತೇಜಸ್ವಿನಿ ಹಾಗೂ ಜೆಎಫ್ಡಿ ಸ್ಮಿತಾ ಮೋಹನ್, ಜೇಸಿ ಶ್ವೇತಾ, ಜೇಸಿ ಚೈತ್ರ, ಜೆಎಫ್ಡಿ ಮೋಹನ್ ಕಲ್ಪತರು, ಜೇಸಿ ನಿರ್ಮಲ, ಜೆಸಿ ನೇತ್ರಾವತಿ, ಜೇಸಿ ಹೇಮಲತಾ, ಜೇಸಿ ಪೂರ್ಣಿಮಾ, ಜೇಸಿ ಬಸವರಾಜ್ ಸೇರಿದಂತೆ ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ಸದಸ್ಯರು ಹಾಗೂ ವಲಯ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
JCI Shivamogga Royals installed a welcome board carrying key road safety and traffic awareness messages for the public in Shivamogga.



More Stories
ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ: ವಕೀಲರ ಧರಣಿಗೆ ರೈತ ಸಂಘದ ಬೆಂಬಲ
ಮಧ್ವಾಚಾರ್ಯರ ಜಯಂತಿ ಆದೇಶ ಸ್ವಾಗತ, ರಾಮಾನುಜ ಜಯಂತಿಗೂ ಆಗ್ರಹ
ದಸರಾ ಮಹಿಳಾ ಸದೃಢತೆ, ಸಮನ್ವಯತೆ, ಸಮೃದ್ಧಿಯ ಪ್ರತೀಕ: ಶ್ರೀರಂಜಿನಿ