AI-ವಾರ್ತಾ | ಶಿವಮೊಗ್ಗ | ಅಕ್ಟೋಬರ್ 12, 2026

ಶಿವಮೊಗ್ಗ: ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಶಿವಮೊಗ್ಗಕ್ಕೂ ವಿಸ್ತರಿಸಿದ್ದು, ನಗರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಸೋಮಣ್ಣ ಅವರ ಕಾರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಿದರು.
ಬಸ್ ನಿಲ್ದಾಣ ಸಮೀಪದ ಅಶೋಕ್ ಸರ್ಕಲ್ನಲ್ಲಿ ಸಚಿವರ ವಾಹನ ಬರುತ್ತಿದ್ದಂತೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ವಾಹನದತ್ತ ಧಾವಿಸಿದ ಅವರು ಎಸ್‌ಐಆರ್ ವಿರುದ್ಧ ಘೋಷಣೆ ಕೂಗಿ, ಕಪ್ಪು ಬಾವುಟ ಹಾಗೂ ಕಪ್ಪು ಪಟ್ಟಿ ಪ್ರದರ್ಶಿಸಿ ವಿರೋಧ ದಾಖಲಿಸಿದರು.
ಕಾರ್ಯಕರ್ತರು ವಾಹನದ ಮುಂದೆ ಜಮಾಯಿಸಿದ್ದರಿಂದ ಸಚಿವರ ವಾಹನಗಳು ಮುಂದೆ ಸಾಗಲು ಅಡಚಣೆಯಾಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಪೊಲೀಸರಿಗೆ ಸವಾಲಾಯಿತು ಎಂದು ತಿಳಿದುಬಂದಿದೆ.
ಕಾರ್ಯಕರ್ತರನ್ನು ಸ್ಥಳದಿಂದ ತೆರವುಗೊಳಿಸಲು ಪೊಲೀಸರು ಮುಂದಾದರು. ಆದರೂ ಪ್ರತಿಭಟನಾಕಾರರು ರಸ್ತೆಯಲ್ಲೇ ಇದ್ದ ಕಾರಣ ಕೆಲಕಾಲ ಸಂಚಾರಕ್ಕೆ ತೊಡಕಾಯಿತು. ಕೊನೆಗೆ ಪೊಲೀಸರು ಹರಸಾಹಸಪಟ್ಟು ಸಚಿವರ ವಾಹನಗಳನ್ನು ಮುಂದಕ್ಕೆ ಕಳುಹಿಸಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ , ನಗರಾಧ್ಯಕ್ಷ ಚರಣ್ ತಾಲೂಕು ಅಧ್ಯಕ್ಷ ಪ್ರವೀಣ್, ಆಕಾಶ್, ನಿಖಿಲ್ ವಿಷ್ಣು ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.



More Stories
ಸಹಕಾರ ಶಿಕ್ಷಣ ನಿಧಿಗೆ ₹1 ಲಕ್ಷ: ಸಿಟಿ ಕೋ ಆಪರೇಟಿವ್ ಬ್ಯಾಂಕ್ ಚೆಕ್ ಹಸ್ತಾಂತರ
ಶಾಂತಿ ಸಾಗರ ಕಲಾ ಸಂಘದಿಂದ ಭಾವಗೀತೆ, ಜನಪದ ಗೀತೆ ಗಾಯನ; ಉಚಿತ ಪ್ರವೇಶ
ನಿಖಿಲ್ ಕುಮಾರಸ್ವಾಮಿ ಅ.12ಕ್ಕೆ ಶಿವಮೊಗ್ಗಕ್ಕೆ: ರೈತ ಸ್ವಾಭಿಮಾನಿ ಯಾತ್ರೆ