ಶಿವಮೊಗ್ಗದಲ್ಲಿ ಮಾನವೀಯ ಕಳಕಳಿಯ ಕಾರ್ಯಕ್ರಮ; ಆಸಕ್ತರು ದಾಖಲೆಗಳೊಂದಿಗೆ ಭಾಗವಹಿಸಲು ಮನವಿ
ಶಿವಮೊಗ್ಗ: “ಮನುಷ್ಯನಿಗೆ ಮನುಷ್ಯನೇ ನೆರವಾಗಬೇಕು” ಎಂಬ ಮಾನವೀಯ ಧ್ಯೇಯದೊಂದಿಗೆ ಶಿವಮೊಗ್ಗ ನಗರದ ಶ್ರೀ ಕಾಶಿ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಆಗಸ್ಟ್ 30ರಂದು ಭಾನುವಾರ ವಿವಿಧ ವರ್ಗದವರಿಗೆ ಸಂಬಂಧಿಸಿದ ವಿಧುರ–ವಿಧವಾ, ಪರಿತ್ಯಕ್ತರು ಹಾಗೂ ಪ್ರಥಮ ವಿವಾಹಾಕಾಂಕ್ಷಿಗಳ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧೆಡೆಯಿಂದ ವಿಧುರ–ವಿಧವೆಯರು, ಪರಿತ್ಯಕ್ತರು ಹಾಗೂ ಪ್ರಥಮ ವಿವಾಹದ ಆಕಾಂಕ್ಷಿಗಳು ಭಾಗವಹಿಸಲಿದ್ದಾರೆ. ರೂಢಿಗತ ಸಂಕೋಲೆಗಳಿಂದ ಹೊರಬಂದು ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಈ ಸಮಾಲೋಚನಾ ಸಭೆ ಸಹಕಾರಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ
ಆಗಸ್ಟ್ 30ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ನಗರದ ಶ್ರೀ ಕಾಶಿ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಹಲವು ಮಂದಿ ಅಡ್ವಾನ್ಸ್ ಆಗಿ ನೋಂದಣಿ ಮಾಡಿಕೊಂಡಿದ್ದು, ಆಸಕ್ತರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9448143165 / 7022413161 ಸಂಪರ್ಕಿಸಬಹುದು.
ದಾಖಲೆಗಳೊಂದಿಗೆ ಭಾಗವಹಿಸಲು ಸೂಚನೆ
ಕಾರ್ಯಕ್ರಮದಲ್ಲಿ ಭಾಗವಹಿಸುವವರು ಫೋಟೋ, ಆಧಾರ್ ಕಾರ್ಡ್ ಹಾಗೂ ಅಗತ್ಯ ಇತರೆ ದಾಖಲೆಗಳೊಂದಿಗೆ ಹಾಜರಾಗುವಂತೆ ಆಯೋಜಕರು ತಿಳಿಸಿದ್ದಾರೆ.
ಈ ಹಿಂದೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭ್ಯರ್ಥಿಗಳು ಪುನಃ ಸಭಾಂಗಣದಲ್ಲಿ ಭಾಗವಹಿಸಲು ರಸೀದಿ ಜೊತೆಗೆ ಬರಬೇಕು ಎಂದು ವಿಶೇಷವಾಗಿ ಸೂಚಿಸಲಾಗಿದೆ.
ಸ್ಥಳ: ಶ್ರೀ ಕಾಶಿ ಕೌಶಲ್ಯಾಭಿವೃದ್ಧಿ ಕೇಂದ್ರ, ಒಂದನೇ ಮೆಟ್ಟಿಲು, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಪ್ರೆಸ್ ಕ್ಲಬ್ ಎದುರು, ಆರ್.ಟಿ.ಓ. ಕಚೇರಿ ರಸ್ತೆ, ಶಿವಮೊಗ್ಗ.
ಸಂಪರ್ಕ: 9448143165 / 7022413161
A counselling and matrimonial interaction meeting for widowers, widows, separated persons and first-marriage aspirants will be held in Shivamogga on August 30.



More Stories
ಶಿವಮೊಗ್ಗದಲ್ಲಿ ಹೆಚ್1ಎನ್1 ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ: ಪರೀಕ್ಷೆ, ಚಿಕಿತ್ಸೆ ಉಚಿತ
ಶಿವಮೊಗ್ಗದ 3 ಇಎಸ್ಐಸಿ ಡಿಸ್ಪೆನ್ಸರಿಗಳಿಗೆ ಶಾಸಕ ಚನ್ನಬಸಪ್ಪ ದಿಢೀರ್ ಭೇಟಿ; ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ಅಂಗಾಂಗ ದಾನಕ್ಕೆ ಜಾಗೃತಿ ಮೂಡಿಸಿದ ಅಪೋಲೋ ಆಸ್ಪತ್ರೆ, ಸುಶೋಧ ಸಂಸ್ಥೆ