ಶಿವಮೊಗ್ಗ, ಆಗಸ್ಟ್ 21: ನಗರದ ಪ್ರತಿಷ್ಠಿತ ಕಟೀಲು ವಿದ್ಯಾ ಸಂಸ್ಥೆಯಲ್ಲಿ ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು, ಗೃಹಿಣಿಯರು ಹಾಗೂ ಉದ್ಯೋಗಸ್ಥರು ಸರಳವಾಗಿ ಸಂಸ್ಕೃತದಲ್ಲಿ ಮಾತನಾಡಲು, ಬರೆಯಲು ಮತ್ತು ಓದಲು ಅನುಕೂಲವಾಗುವ ಸಂಸ್ಕೃತ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲು ಮಾನಸ ಸಂಸ್ಕೃತ ಸಂಜೆ ವಿದ್ಯಾಲಯಕ್ಕೆ ಮಾನ್ಯತೆ ದೊರೆತಿದೆ.
ಕೋರ್ಸ್ನ ತರಗತಿಗಳು ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಗಸ್ಟ್ 24ರಂದು ಸೋಮವಾರ ಸಂಜೆ 6.30ಕ್ಕೆ ಆಸಕ್ತರ ಸಭೆ ಆಯೋಜಿಸಲಾಗಿದೆ.
ನಗರದ ಟಿ.ಎಸ್.ಬಿ. ವೃತ್ತ (ಗೋಪೀ ಸರ್ಕಲ್) ಹಿಂಭಾಗದ ಸವಾರ್ ಲೇನ್ ರಸ್ತೆಯಲ್ಲಿರುವ ಮಾನಸ ಸಂಸ್ಥೆಯ ಎದುರು ಭಾಗದಲ್ಲಿರುವ ಮಾನಸ ಭವನದಲ್ಲಿ ಸಭೆ ನಡೆಯಲಿದೆ.
ಸಭೆಯಲ್ಲಿ ಕೋರ್ಸ್ನ ತರಗತಿ ಆರಂಭ, ನೋಂದಣಿ ಪ್ರಕ್ರಿಯೆ, ಪರೀಕ್ಷೆ, ನೋಂದಣಿಗೆ ಅಗತ್ಯವಿರುವ ದಾಖಲೆಗಳು ಸೇರಿದಂತೆ ಇತರ ಅಗತ್ಯ ಮಾಹಿತಿಗಳನ್ನು ನೀಡಲಾಗುತ್ತದೆ.
16 ವರ್ಷ ಮೇಲ್ಪಟ್ಟ ಎಲ್ಲರಿಗೂ ಜಾತಿ-ಮತದ ಯಾವುದೇ ಭೇದವಿಲ್ಲದೆ ಸಂಸ್ಕೃತ ಕಲಿಯಲು ಅವಕಾಶವಿದೆ. ಸಂಸ್ಕೃತ ಕಲಿಯಲು ಆಸಕ್ತಿ ಹೊಂದಿರುವವರು ಸಭೆಗೆ ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ಸಂಯೋಜಕ ಅ.ನಾ. ವಿಜಯೇಂದ್ರ ರಾವ್ ತಿಳಿಸಿದ್ದಾರೆ.
A Sanskrit Certificate Course will be launched in Shivamogga with recognition from the Central Sanskrit University, Delhi. An introductory meeting for interested participants will be held on August 24 at 6:30 PM.



More Stories
ಅಂತರರಾಷ್ಟ್ರೀಯ ಹೃದ್ರೋಗ ತಜ್ಞರ ಸಮ್ಮೇಳನದಲ್ಲಿ ಡಾ. ಶರತ್ ಸಂಗನಗೌಡರ್ ಅವರಿಗೆ ಪ್ರಶಸ್ತಿ
ವೃತ್ತಿಯ ಜೊತೆಗೆ ಸಮಾಜ ಸೇವೆಯೂ ಮುಖ್ಯ: ಶಿಕ್ಷಕಿ ತುಳಸಿ ಅಡಿಗ
ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳು ಮತ್ತೊಬ್ಬರ ಬಾಳಿಗೆ ಬೆಳಕಾಗಲಿ: ವಿ. ನಾಗರಾಜ್