ಮೈಸೂರು: ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ಆರ್ಟ್ ಈವೆಂಟ್ಸ್ ಮ್ಯಾನೇಜ್‌ಮೆಂಟ್‌ನ ‘ಶ್ರೀ ಆರ್ಟ್ ಫಿಲ್ಮ್ಸ್’ ವತಿಯಿಂದ ಗಡಿನಾಡಹುಲಿ ಫಿಲ್ಮ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಅಮೋಘ’ ಕನ್ನಡ ಚಲನಚಿತ್ರದ ‘ಹೊತ್ತಳು ನನ್ನ ಭಾರ’ ಎಂಬ ತಾಯಿ ಕುರಿತ ಭಾವಪೂರ್ಣ ಹಾಡು ಬಿಡುಗಡೆ ಮಾಡಲಾಗಿದೆ.
ಮೈಸೂರು, ಬೆಂಗಳೂರು, ಮಡಿಕೇರಿ ಹಾಗೂ ಮಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳು ಹಾಗೂ ಒಂದು ಸಾಹಸ ದೃಶ್ಯ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.
ಗಡಿನಾಡಹುಲಿ ಪುನೀತ್ ಕುಮಾರ್ ಕೆ.ಎನ್. ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಲೇಖಕ ಹಾಗೂ ನಿರ್ಮಾಪಕರಾಗಿ ಲಿಖಿತ್ ಕುಮಾರ್ ಶ್ರೀಧರ್ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರತಂಡದ ಪ್ರಕಾರ, ಈಗಾಗಲೇ ‘ಹೊತ್ತಳು ನನ್ನ ಭಾರ’ ಹಾಡು ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರದ ತಾರಾಗಣದಲ್ಲಿ ಮಿಶೆಲ್ ಸೆಕ್ವೇರಾ, ಗಡಿನಾಡಹುಲಿ ಪುನೀತ್ ಕುಮಾರ್, ಕೆ.ಎನ್. ರೇಷ್ಮಾ, ಪ್ರತಿಭಾ ಶೆಟ್ಟಿ, ಈಶ್ವರ್ ಶೆಟ್ಟಿ, ಸಂತೋಷ್ ಗೋಪಾಲ್ ರೆಡ್ಡಿ, ಧನುಷ್ ಎಸ್.ಕೆ., ಕಲ್ಕಿ, ಮಾಸ್ಟರ್ ಪ್ರೀತಮ್, ಮಾಸ್ಟರ್ ಲಿಶಾಶ್ರೀ, ಶ್ರೀನಿವಾಸ ಮೂರ್ತಿ ಹಾಗೂ ಶ್ವೇತ ಲಿಖಿತ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಹರ್ಷ ಶ್ರೀಧರ್ (ಆಕಾಶ್) ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದು, ಧನುಷ್ ಡಿ.ಕೆ.ಎಸ್. ಸಂಗೀತ ಸಂಯೋಜನೆ ಮಾಡಿದ್ದಾರೆ. ಭವತಾರಿಣಿ ಕೆ.ಎನ್. ಹಿನ್ನೆಲೆ ಗಾಯಕರಾಗಿ ಭಾಗವಹಿಸಿದ್ದಾರೆ.
ಎಸ್‌ಎಫ್‌ಎಕ್ಸ್ ಮನು ರೆ, ರೆಕಾರ್ಡಿಂಗ್ ಹಾಗೂ ಮಾಸ್ಟರಿಂಗ್ ಅನ್ನು ಎಂ. ರಾವ್ ಸ್ಟುಡಿಯೋ, ಮೈಸೂರು ನಿರ್ವಹಿಸಿದೆ. ಕಲಾ ನಿರ್ದೇಶನವನ್ನು ಚಂದನಕುಮಾರ್ ವಹಿಸಿಕೊಂಡಿದ್ದು, ಪಿಆರ್‌ಒ ಆಗಿ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಗಿ ಹಾಗೂ ಸಹ ನಿರ್ದೇಶಕರಾಗಿ ವಸಂತಕುಮಾರ್ ಎಸ್.ಎನ್. ಕಾರ್ಯನಿರ್ವಹಿಸಿದ್ದಾರೆ.
ತಾಯಿ ತ್ಯಾಗವನ್ನು ಬಿಂಬಿಸುವ ಹಾಡು
ತಾಯಿಯ ತ್ಯಾಗ, ಬಲಿದಾನ ಮತ್ತು ಮಮತೆಯನ್ನು ಭಾವಪೂರ್ಣವಾಗಿ ಬಿಂಬಿಸುವ ‘ಹೊತ್ತಳು ನನ್ನ ಭಾರ’ ಹಾಡನ್ನು ‘ಶ್ರೀ ಆರ್ಟ್ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರತಂಡವು ಪ್ರೇಕ್ಷಕರು ಹಾಡನ್ನು ವೀಕ್ಷಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದೆ.



More Stories
ಹರಿಗೆ ಗ್ರಾಮದಲ್ಲಿ ಮದುವೆ ಬೃಹತ್ ಊಟಕ್ಕೆ ನಿಷೇಧ; 1 ಲಕ್ಷ ರೂ. ದಂಡ
ಯತ್ನಾಳ್ ವಿರುದ್ಧ ಎಫ್ಐಆರ್: ಬದುಕಿದ್ದವರಿಗೆ ಮರಣ ಪ್ರಮಾಣ ಪತ್ರ ಆರೋಪ
ವಿಜಯೇಂದ್ರ ಆರೋಪ: ಸ್ಟಿಂಗ್ ಆಪರೇಷನ್ ಕಾಂಗ್ರೆಸ್ನ ಚರಿತ್ರೆ