ಶಿವಮೊಗ್ಗ: ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್, 2025-26ನೇ ಸಾಲಿನ ಸಾಧನೆಗೆ ಹಾಸನದಲ್ಲಿ ನಡೆದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 18 ಜಿಲ್ಲಾ ಪ್ರಶಸ್ತಿಗಳೊಂದಿಗೆ ಪ್ರತಿಷ್ಠಿತ ಎಕ್ಸಲೆನ್ಸ್ ಅವಾರ್ಡ್ ಪಡೆದುಕೊಂಡಿದೆ.
ಹಾಸನದಲ್ಲಿ ಆಗಸ್ಟ್ 29 ಮತ್ತು 30ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ಲಬ್‌ನ ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ಗೌರವಗಳನ್ನು ನೀಡಲಾಗಿದೆ.
ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಪಲ್ಸ್ ಪೋಲಿಯೋ, ಮಹಿಳಾ ಸಬಲೀಕರಣ ಹಾಗೂ ಯುವಜನಾಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕೈಗೊಂಡಿದ್ದ ಸೇವಾ ಚಟುವಟಿಕೆಗಳಿಗೆ ಪ್ರಶಸ್ತಿಗಳು ಲಭಿಸಿವೆ.
ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಜಿಲ್ಲಾ ಆಡಳಿತವು ಕ್ಲಬ್‌ನ ಸೇವಾ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದೆ. ಈ ಮೂಲಕ ಶಿವಮೊಗ್ಗ ಈಸ್ಟ್ ಕ್ಲಬ್ ಜಿಲ್ಲೆಯಲ್ಲಷ್ಟೇ ಅಲ್ಲದೆ ರೋಟರಿ ಜಿಲ್ಲಾ ಮಟ್ಟದಲ್ಲಿಯೂ ತನ್ನ ಸೇವಾ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ.
ಪ್ರಶಸ್ತಿ ಸ್ವೀಕರಿಸಿದ ಪದಾಧಿಕಾರಿಗಳು
ಸಮಾರಂಭದಲ್ಲಿ ಮಾಜಿ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್ ಡಿ., ಕಾರ್ಯದರ್ಶಿ ಬಿ.ಆರ್. ಧನಂಜಯ, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಮಾಜಿ ಸಹಾಯಕ ಗವರ್ನರ್ ಜಿ. ವಿಜಯ ಕುಮಾರ್, 2026-27ನೇ ಸಾಲಿನ ಅಧ್ಯಕ್ಷ ಡಿ.ಕೆ. ಶೇಷಗಿರಿ, ಮಧು ಎಚ್.ಎಂ., 2027-28ನೇ ಸಾಲಿನ ಅಧ್ಯಕ್ಷ ಶಶಿಕಾಂತ್ ನಾಡಿಗ್, ವೀಣಾ ಕಿಶೋರ್, ಪದ್ಮಿನಿ ವಸಂತ್ ಹೋಬಳಿದಾರ್, ಬಿಂದು ವಿಜಯಕುಮಾರ್ ಸೇರಿದಂತೆ ಕ್ಲಬ್‌ನ ಇತರ ಸದಸ್ಯರು ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯ
18 ಜಿಲ್ಲಾ ಪ್ರಶಸ್ತಿಗಳು ಹಾಗೂ ಎಕ್ಸಲೆನ್ಸ್ ಅವಾರ್ಡ್ ಲಭಿಸಿರುವುದು ಕ್ಲಬ್‌ನ ನಿರಂತರ ಸಮಾಜಸೇವಾ ಕಾರ್ಯಗಳಿಗೆ ದೊರೆತ ಗೌರವವಾಗಿದೆ ಎಂದು ಕ್ಲಬ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಾಧನೆಯು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರಣೆಯಾಗಿದೆ ಎಂದು ಅವರು ಹೇಳಿದ್ದಾರೆ.



More Stories
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಸದ್ಯಕ್ಕಿಲ್ಲ: ಬಿಪಿಎಲ್ ಕಾರ್ಡ್ದಾರರಿಗೆ ಸಚಿವ ರಿಜ್ವಾನ್ ಅರ್ಷದ್ ಬಿಗ್ ರಿಲೀಫ್
ಹಣಗೆರೆಕಟ್ಟೆ ಭಾವೈಕ್ಯತಾ ಕೇಂದ್ರ: ಕಾಣಿಕೆ ಹುಂಡಿಯಲ್ಲಿ ₹54.50 ಲಕ್ಷಕ್ಕೂ ಅಧಿಕ ಹಣ ಸಂಗ್ರಹ; ಧಾರ್ಮಿಕ ಸೌಹಾರ್ದತೆಗೆ ಹೆಸರುವಾಸಿಯಾದ ಮುಜರಾಯಿ ಇಲಾಖೆಯ ‘ಎ’ ಶ್ರೇಣಿಯ ಕ್ಷೇತ್ರ
ಶಿವಮೊಗ್ಗ ರೋಟರಿ ಕ್ಲಬ್ ಉತ್ತರ ಘಟಕದ ಸಮಾಜಮುಖಿ ಸೇವೆಗೆ ಸಂದ ಗೌರವ: ಭರಪೂರ 33 ಜಿಲ್ಲಾ ಪ್ರಶಸ್ತಿ ಪ್ರಧಾನ