ಕುಟುಂಬದ ಪ್ರೋತ್ಸಾಹದೊಂದಿಗೆ ಆಡಿಷನ್ ವಿಡಿಯೋ ಸಲ್ಲಿಕೆ; ಜನಸಾಮಾನ್ಯರಿಗೂ ಅವಕಾಶ ನೀಡಿರುವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮಹಿಳಾ ನಾಯಕಿಯ ಮೇಲೆ ಸ್ಥಳೀಯರ ನಿರೀಕ್ಷೆ
https://www.facebook.com/share/v/1MeGkrXavj/
ಶಿವಮೊಗ್ಗ: ರಾಜಕೀಯ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜೆಡಿಎಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾ ಸತೀಶ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 13 ಕಾರ್ಯಕ್ರಮಕ್ಕೆ ಅವಕಾಶ ಪಡೆಯುವ ನಿರೀಕ್ಷೆಯಲ್ಲಿ ಆಡಿಷನ್ಗೆ ತಮ್ಮ ವಿಡಿಯೋವನ್ನು ಸಲ್ಲಿಸಿದ್ದಾರೆ.
ಗೀತಾ ಸತೀಶ್ ಅವರು ಸತತ ಮೂರು ಅವಧಿಗಳಿಂದ ಜೆಡಿಎಸ್ ಜಿಲ್ಲಾ ಮಹಿಳಾ ಅಧ್ಯಕ್ಷೆಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮರಾಠ ಸಮಾಜದ ಪ್ರಮುಖ ಮುಖಂಡರಲ್ಲೊಬ್ಬರಾಗಿರುವ ಅವರು ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದಾರೆ
ಈ ಬಾರಿ ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆಯಲ್ಲಿ ಜನಸಾಮಾನ್ಯರಿಗೂ ಅವಕಾಶವಿದೆ ಎಂಬ ಮಾಹಿತಿ ತಿಳಿದ ಬಳಿಕ, ಕುಟುಂಬದ ಮಕ್ಕಳ ಪ್ರೋತ್ಸಾಹ ಮತ್ತು ಆಸೆಯ ಮೇರೆಗೆ ಗೀತಾ ಸತೀಶ್ ಅವರು ತಮ್ಮ ವ್ಯಕ್ತಿತ್ವ, ಸಾಮಾಜಿಕ ಚಟುವಟಿಕೆಗಳು ಮತ್ತು ಜೀವನದ ಕುರಿತು ಸುಮಾರು ಮೂರು ನಿಮಿಷಗಳ ವಿಡಿಯೋವನ್ನು ಸಿದ್ಧಪಡಿಸಿ ಆಯ್ಕೆ ಪ್ರಕ್ರಿಯೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಆಯ್ಕೆ ಪ್ರಕ್ರಿಯೆಯ ಕುರಿತು ಕುಟುಂಬ ಸದಸ್ಯರಲ್ಲೂ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. “ವಿಡಿಯೋ ಸರಳವಾಗಿ ಮತ್ತು ಸಹಜವಾಗಿ ಮಾಡಿದ್ದರೂ, ಎಲ್ಲವೂ ಒಳ್ಳೆಯದಕ್ಕಾಗಿಯೇ ನಡೆಯುತ್ತದೆ” ಎಂಬ ವಿಶ್ವಾಸವನ್ನು ಕುಟುಂಬ ಸದಸ್ಯರು ವ್ಯಕ್ತಪಡಿಸಿದ್ದಾರೆ.
ಇದೀಗ ಶಿವಮೊಗ್ಗದ ಹಲವು ಮಂದಿ ಗೀತಾ ಸತೀಶ್ ಅವರು ಕಾರ್ಯಕ್ರಮದ ಮುಂದಿನ ಹಂತಕ್ಕೆ ಆಯ್ಕೆಯಾಗಲಿ ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಹಿಳಾ ನಾಯಕಿಯೊಬ್ಬರು ರಾಜ್ಯಮಟ್ಟದ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆಯುವುದು ಶಿವಮೊಗ್ಗಕ್ಕೆ ಹೆಮ್ಮೆಯ ಕ್ಷಣವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಂತಿಮ ಆಯ್ಕೆ ಪ್ರಕ್ರಿಯೆಯ ಫಲಿತಾಂಶಕ್ಕಾಗಿ ಗೀತಾ ಸತೀಶ್ ಅವರ ಕುಟುಂಬಸ್ಥರು, ಬೆಂಬಲಿಗರು ಹಾಗೂ ಶಿವಮೊಗ್ಗದ ಜನರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.



More Stories
ಆಗಸ್ಟ್ 30ರಂದು ಶಿವಮೊಗ್ಗದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ನೇಪಾಳ ಪ್ರವಾಸದಲ್ಲಿದ್ದ ಶಿವಮೊಗ್ಗದ 56 ಮಂದಿ ಪ್ರವಾಸಿಗರು ಸುರಕ್ಷಿತ
ಅಂತರರಾಷ್ಟ್ರೀಯ ಹೃದ್ರೋಗ ತಜ್ಞರ ಸಮ್ಮೇಳನದಲ್ಲಿ ಡಾ. ಶರತ್ ಸಂಗನಗೌಡರ್ ಅವರಿಗೆ ಪ್ರಶಸ್ತಿ