ಯುವಜನರಲ್ಲಿ ಏಕತೆ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವ ಉದ್ದೇಶದ ‘ಭಾರತ್ ಜೋಡೋ’ ಕಾರ್ಯಕ್ರಮದ ಅಧಿಕೃತ ನೂತನ ಲೋಗೋವನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅನಾವರಣಗೊಳಿಸಿದ್ದಾರೆ.

ಬೆಂಗಳೂರು, ಸೆ.04: ಯುವಜನರನ್ನು ಒಗ್ಗೂಡಿಸಿ ಏಕತೆ, ಸಾಮಾಜಿಕ ಸಾಮರಸ್ಯ, ಜವಾಬ್ದಾರಿಯುತ ನಾಗರಿಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿರುವ ಮಹತ್ವಾಕಾಂಕ್ಷಿ ‘ಭಾರತ್ ಜೋಡೋ’ ಕಾರ್ಯಕ್ರಮದ ಅಧಿಕೃತ ನೂತನ ಲೋಗೋವನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಇಂದು ಅಧಿಕೃತವಾಗಿ ಅನಾವರಣಗೊಳಿಸಿದರು.
ಈ ಮಹತ್ವದ ಕಾರ್ಯಕ್ರಮಕ್ಕೆ ವಿಶಿಷ್ಟ ಗುರುತನ್ನು ನೀಡುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಲೋಗೋ ವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಒಟ್ಟು 255 ವಿನ್ಯಾಸಗಳು ಸಲ್ಲಿಕೆಯಾಗಿದ್ದವು.
ಪಾರದರ್ಶಕ ಆಯ್ಕೆ ಪ್ರಕ್ರಿಯೆ: ಸಲ್ಲಿಕೆಯಾಗಿದ್ದ ಲೋಗೋ ವಿನ್ಯಾಸಗಳ ಪರಿಶೀಲನೆ ಹಾಗೂ ಅಂತಿಮ ಆಯ್ಕೆಯ ಜವಾಬ್ದಾರಿಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ಗೆ ವಹಿಸಲಾಗಿತ್ತು. ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕ, ನ್ಯಾಯಸಮ್ಮತ ಮತ್ತು ವೃತ್ತಿಪರವಾಗಿ ನಡೆಸಿದ ಚಿತ್ರಕಲಾ ಪರಿಷತ್, ಎಲ್ಲಾ ವಿನ್ಯಾಸಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿ ಅಂತಿಮವಾಗಿ ಎರಡು ಲೋಗೋಗಳನ್ನು ಆಯ್ಕೆ ಮಾಡಿತ್ತು.
ಸೃಜನಾತ್ಮಕ ಸಂಯೋಜನೆಯ ಲೋಗೋ: ಚಿತ್ರಕಲಾ ಪರಿಷತ್ ಆಯ್ಕೆ ಮಾಡಿದ್ದ ಎರಡು ಅಂತಿಮ ವಿನ್ಯಾಸಗಳನ್ನು ಅನುಮೋದನೆಗಾಗಿ ಉಪಮುಖ್ಯಮಂತ್ರಿಗಳ ಮುಂದೆ ಮಂಡಿಸಲಾಗಿತ್ತು. ಈ ಎರಡೂ ವಿನ್ಯಾಸಗಳಲ್ಲಿನ ಪ್ರಮುಖ ಅಂಶಗಳು ಹಾಗೂ ಪರಿಕಲ್ಪನೆಗಳನ್ನು ಸೃಜನಾತ್ಮಕವಾಗಿ ಸಂಯೋಜಿಸಿ, ‘ಭಾರತ್ ಜೋಡೋ’ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಹಾಗೂ ವಿಶಿಷ್ಟ ದೃಶ್ಯ ಗುರುತನ್ನು ಹೊಂದಿರುವ ಅಂತಿಮ ಲೋಗೋವನ್ನು ರೂಪಿಸಲಾಗಿದೆ.
ಈ ಹೊಸ ಲೋಗೋವು ಏಕತೆ, ಒಗ್ಗಟ್ಟು, ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಕರ್ನಾಟಕದ ಜನತೆಯ ಸಾಮೂಹಿಕ ಶಕ್ತಿಯನ್ನು ಪ್ರತಿಬಿಂಬಿಸುವಂತಿದ್ದು, ರಾಜ್ಯಾದ್ಯಂತ ಕಾರ್ಯಕ್ರಮದ ಅನುಷ್ಠಾನದ ಪಯಣದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ತಿಳಿಸಲಾಗಿದೆ.
Deputy Chief Minister Dr. G. Parameshwara officially unveiled the new logo for the ambitious ‘Bharat Jodo’ program in Bengaluru. Out of 255 entries submitted by the public, Karnataka Chitrakala Parishath evaluated and selected the top designs, which were creatively merged to form the final logo. The program aims to foster unity, social harmony, and active youth participation in nation-building.



More Stories
ಡಾ. ಹಸೀನಾ ಎಚ್.ಕೆ. ಅವರಿಗೆ ‘ರಾಷ್ಟ್ರೀಯ ಗಝಲ್ ರತ್ನ’ ಪ್ರಶಸ್ತಿ
Nepal Flood: ಕಾಣೆಯಾದ ಕನ್ನಡಿಗರ DNA ಸಂಗ್ರಹಕ್ಕೆ ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರ
ಏಥರ್ ‘ಕೋನಾರ್ಕ್’ ಇವಿ ಸ್ಕೂಟರ್ ಬಿಡುಗಡೆ: ಬೆಲೆ ₹99,999